Wednesday, June 3, 2026
Homeಕರಾವಳಿಉಡುಪಿನಾಡದೋಣಿಯಲ್ಲಿ ಮೀನುಗಾರಿಕೆಗೆ ತೆರಳಿದ್ದ ಮೀನುಗಾರರು ನೀರುಪಾಲಾದ ಘಟನೆ; ಓರ್ವನ ಮೃತದೇಹ ಪತ್ತೆ

ನಾಡದೋಣಿಯಲ್ಲಿ ಮೀನುಗಾರಿಕೆಗೆ ತೆರಳಿದ್ದ ಮೀನುಗಾರರು ನೀರುಪಾಲಾದ ಘಟನೆ; ಓರ್ವನ ಮೃತದೇಹ ಪತ್ತೆ

- Advertisement -
- Advertisement -

ಉಡುಪಿ: ನಾಡದೋಣಿಯೊಂದಿಗೆ ಸಮುದ್ರಕ್ಕೆ ತೆರಳಿದ್ದ ಮೀನುಗಾರರು ನೀರುಪಾಲಾದ ಘಟನೆಗೆ ಸಂಬಂಧಿಸಿದಂತೆ ಓರ್ವನ ಮೃತದೇಹ ಬುಧವಾರ ಬೆಳಗಿನ ಜಾವ ಪತ್ತೆಯಾಗಿದೆ.

ಗಂಗೊಳ್ಳಿ ಬೇಲಿಕೆರಿ ನಿವಾಸಿ ಲೋಹಿತ್ ಖಾರ್ವಿ (39) ಅವರ ಮೃತದೇಹ ಪತ್ತೆಯಾಗಿದೆ.

ಘಟನೆಯ ವಿವರ: ಸಮುದ್ರಕ್ಕೆ ನಾಡದೋಣಿಯೊಂದಿಗೆ ಮೀನುಗಾರಿಕೆಗೆಂದು ತೆರಳಿದ್ದ ವೇಳೆ ಗಂಗೊಳ್ಳಿಯ ಹಳೆ ಅಳಿವೆ ಪ್ರದೇಶದಲ್ಲಿ ದೋಣಿ ಮಗುಚಿ ಮೂವರು ಮೀನುಗಾರರು ನಾಪತ್ತೆಯಾಗಿದ್ದರು. ಜುಲೈ 15 ರ ಬೆಳಿಗ್ಗೆ ಗಂಗೊಳ್ಳಿಯ ಹಳೆಯ ಅಳಿವೆ ಪ್ರದೇಶದ ಬಳಿ ಈ ದುರಂತ ಸಂಭವಿಸಿದ್ದು, ನಾಲ್ವರು ಮೀನುಗಾರರಿದ್ದ ದೋಣಿ ತೂಫಾನ್‌ಗೆ ಸಿಲುಕಿ ಮಗುಚಿ ಬಿದ್ದಿತ್ತು. ಅವರಲ್ಲಿ, ಮಲ್ಯಾರಬೆಟ್ಟಿನ ಸಂತೋಷ ಖಾರ್ವಿ ಅವರನ್ನು ಸ್ಥಳೀಯ ಮೀನುಗಾರರು ರಕ್ಷಿಸಿದ್ದಾರೆ. ನಾಪತ್ತೆಯಾಗಿರುವ ಉಳಿದ ಇಬ್ಬರು ಮೀನುಗಾರರಾದ ಗಂಗೊಳ್ಳಿ ನಿವಾಸಿ ಸುರೇಶ್ ಖಾರ್ವಿ (48) ಮತ್ತು ಮಲ್ಯಾರುಬೆಟ್ಟಿನ ಜಗದೀಶ್ ಖಾರ್ವಿ (50) ಗಾಗಿ ಶೋಧ ಕಾರ್ಯ ಮುಂದುವರಿದಿದೆ.

ಲೋಹಿತ್ ಖಾರ್ವಿ ಮೃತದೇಹವನ್ನು ಬೆಳಗಿನ ಜಾವ 4:30ರ ವೇಳೆಗೆ ಮುಳುಗು ತಜ್ಞ ದಿನೇಶ್ ಖಾರ್ವಿ ಅವರ ತಂಡ ಕೋಡಿ ಕಡಲ ತೀರದಲ್ಲಿ ಪತ್ತೆ ಮಾಡಿದೆ.

- Advertisement -

Latest News

error: Content is protected !!