Wednesday, June 3, 2026
Homeಅಪರಾಧಬೌನ್ಸ್ ಚೆಕ್, ನಕಲಿ ಎನ್‌ಇಎಫ್‌ಟಿ ರಶೀದಿ ಬಳಸಿ ಮಹಿಳೆಯಿಂದ 1.98 ಲಕ್ಷ ರೂ ವಂಚನೆ

ಬೌನ್ಸ್ ಚೆಕ್, ನಕಲಿ ಎನ್‌ಇಎಫ್‌ಟಿ ರಶೀದಿ ಬಳಸಿ ಮಹಿಳೆಯಿಂದ 1.98 ಲಕ್ಷ ರೂ ವಂಚನೆ

- Advertisement -
- Advertisement -

ಮಂಗಳೂರು: ಮಂಗಳೂರು, ಉಡುಪಿ ಮತ್ತು ಮೂಡುಬಿದಿರೆ ಸೇರಿದಂತೆ ಹಲವು ಪ್ರದೇಶಗಳ ಅಂಗಡಿಗಳಲ್ಲಿ ವಸ್ತುಗಳನ್ನು ಖರೀದಿಸುವ ನೆಪದಲ್ಲಿ ಮಹಿಳೆಯೊಬ್ಬಳು ಲಕ್ಷಾಂತರ ರೂ ವಂಚಿಸಿರುವ ಬಗ್ಗೆ ವರದಿಯಾಗಿದೆ.  

ವಂಚಿಸಿರುವ ಮಹಿಳೆಯನ್ನು ಫರೀದಾ ಎಂದು ಗುರುತಿಸಲಾಗಿದೆ.

ಈ ಮಹಿಳೆ ನಗರದ ಲ್ಯಾಪ್‌ಟಾಪ್ ಅಂಗಡಿಯೊಂದರಲ್ಲಿ ಬೌನ್ಸ್ ಆದ ಚೆಕ್ ಮತ್ತು ನಕಲಿ ಎನ್‌ಇಎಫ್‌ಟಿ ರಶೀದಿ ಬಳಸಿ 1.98 ಲಕ್ಷ ರೂ. ಮೌಲ್ಯದ ಲ್ಯಾಪ್‌ಟಾಪ್‌ಗಳನ್ನು ದೋಚಿದ್ದಾರೆ.  ಎಂದು ಆರೋಪಿಸಲಾಗಿದೆ. ಈಕೆ ಎಂಪೈರ್ ಮಾಲ್‌ನಲ್ಲಿರುವ ಲ್ಯಾಪ್‌ಟಾಪ್ ಬಜಾರ್ ಅನ್ನು ಗುರಿಯಾಗಿಸಿಕೊಂಡಿದ್ದರು ಎಂದು ಆರೋಪಿಸಲಾಗಿದೆ.  ಅವರು ಸುಳ್ಳು ನೆಪದಲ್ಲಿ ಮೂರು ಲ್ಯಾಪ್‌ಟಾಪ್‌ಗಳನ್ನು ಪಡೆದುಕೊಂಡಿದ್ದಾರೆ ಎಂದು ಹೇಳಲಾಗಿದೆ.

ಫರೀದಾ ಜೂನ್ ಅಂತ್ಯದ ವೇಳೆಗೆ ಅಂಗಡಿಯನ್ನು ಸಂಪರ್ಕಿಸಿ, ಮರುದಿನ ಕತಾರ್‌ಗೆ ಪ್ರಯಾಣಿಸಲಿರುವ ತನ್ನ ಮಗನಿಗೆ ಮ್ಯಾಕ್‌ಬುಕ್ ಬೇಕೆಂದು ತಿಳಿಸಿದ್ದಾರೆ. ಇದೇ ಸಂದರ್ಭದಲ್ಲಿ ಹಣಕಾಸಿನ ಬಗ್ಗೆ ಮಾತಾಡುತ್ತಾ, ಭಾರತದಲ್ಲಿ ತನ್ನ ಬಳಿ ಹಣವಿಲ್ಲ ಅಥವಾ ಸಕ್ರಿಯ ಬ್ಯಾಂಕ್ ಖಾತೆ ಇಲ್ಲ ಮತ್ತು ಚೆಕ್ ಮೂಲಕ ಪಾವತಿಸುವುದಾಗಿ ಸಿಬ್ಬಂದಿಗೆ ಹೇಳಿದರು. ಇದಾದ ಬಳಿಕ ಲ್ಯಾಪ್‌ಟಾಪ್ ತೆಗೆದುಕೊಳ್ಳಲು ಒಬ್ಬ ಹುಡುಗನನ್ನು ಕಳುಹಿಸಲಾಯಿತು, ಅವನ ಬಳಿ ಸ್ವಯಂ ನೀಡಿದ ಚೆಕ್ ಇತ್ತು. ಫರೀದಾ ಅಂಗಡಿ ಮಾಲೀಕರೊಂದಿಗೆ ನಿಕಟ ಸಂಬಂಧ ಹೊಂದಿರುವ ಪರಿಚಿತ ಗ್ರಾಹಕ ಎಂದು ಹೇಳಿಕೊಂಡರು. ಇನ್ನು  ಚೆಕ್ ಅನ್ನು ನಾಲ್ಕನೇ ಶನಿವಾರವಾದ ಕಾರಣಕ್ಕಾಗಿ ತಕ್ಷಣ ಠೇವಣಿ ಮಾಡಲು ಸಾಧ್ಯವಾಗಲಿಲ್ಲ. ಸ್ವಲ್ಪ ಸಮಯದ ನಂತರ, ಪರೀದಾ ಮತ್ತೆ ಅಂಗಡಿಯನ್ನು ಸಂಪರ್ಕಿಸಿ ವಿಂಡೋಸ್ ಲ್ಯಾಪ್‌ಟಾಪ್‌ಗಾಗಿ ವಿನಂತಿಸಿದರು. ಅಲ್ಲದೇ ಫರೀದಾ NEFT ಮೂಲಕ ಮೊತ್ತವನ್ನು ವರ್ಗಾಯಿಸುವುದಾಗಿ ಭರವಸೆ ನೀಡಿದ್ದರು ಎನ್ನಲಾಗಿದೆ. ಅಷ್ಟೇಅಲ್ಲದೆ ವಾಟ್ಯಾಪ್ ಮೂಲಕ ನಕಲಿ ಪಾವತಿ ದೃಢೀಕರಣವನ್ನು ಕಳುಹಿಸಿದರು. 

ಇನ್ನು ಅಂಗಡಿಯು ಆರೋಪಿ ಫರೀದಾಳನ್ನು ನಂಬಿಕೊಂಡು ಮತ್ತೆರಡು ಲ್ಯಾಪ್‌ಟಾಪ್‌ ಹಸ್ತಾಂತರಿಸಿದ್ದರು. ನಂತರದಲ್ಲಿ ಚೆಕ್‌ ಬೌನ್ಸ್‌ ಆದ ವಿಚಾರ ತಿಳಿಯುತ್ತಿದ್ದಂತೆ ಈ ಬಗ್ಗೆ ವಿಚಾರಣೆ ಮಾಡಿದಾಗ NEFT ರಶೀದಿ ನಕಲಿ ಎಂದು ಕಂಡುಬಂದಿದೆ. 

ಈಗಾಗಲೇ ಫರೀದಾ ಮೇಲೆ ಮಂಗಳೂರು, ಉಡುಪಿ ಮತ್ತು ಮೂಡುಬಿದಿರೆಯಲ್ಲಿ ಹಲವಾರು ವಂಚನೆ ಪ್ರಕರಣಗಳು ದಾಖಲಾಗಿದೆ.

- Advertisement -

Latest News

error: Content is protected !!