ಪುತ್ತೂರು : ಸಹಪಾಠಿಯಿಂದ ವಿದ್ಯಾರ್ಥಿನಿ ತಾಯಿಯಾದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸದ್ಯ ಆರೋಪಿ ಕೃಷ್ಣ ಜೆ ರಾವ್ ಜೈಲು ಸೇರಿದ್ದಾನೆ. ಆರೋಪಿ ವಿದ್ಯಾರ್ಥಿನಿಯನ್ನು ಮದುವೆಯಾಗೋದಕ್ಕೆ ನಿರಾಕರಿಸುತ್ತಿದ್ದಾನೆ ಎನ್ನಲಾಗುತ್ತಿದ್ದು ಇದರ ಬೆನ್ನಲ್ಲೇ ಭೂಗತ ಪಾತಕಿ ಕಲಿ ಯೋಗೇಶ್ ಟಿವಿ9 ವಾಹಿನಿಯ ಉಡುಪಿ ವರದಿಗಾರರಿಗೆ ಕರೆಮಾಡಿ ಆರೋಪಿಗೆ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.
ಟಿವಿ9 ವಾಹಿನಿಯ ಉಡುಪಿ ವರದಿಗಾರರಿಗೆ ಕರೆ ಮಾಡಿದ ಕಲಿ ಯೋಗೇಶ್ ಬಿಜೆಪಿ ಮುಖಂಡನ ಪುತ್ರನ ಪ್ರಕರಣದ ಬಗ್ಗೆ ನಮಗೂ ದೂರು ಬಂದಿದೆ. ಓರ್ವ ಯುವತಿಯನ್ನು ಗಭಿ೯ಣಿ ಮಾಡಿ ಮೋಸ ಮಾಡಿದ್ದು, ಈಗ ಜೈಲಿನಲ್ಲಿ ಇದ್ದಾನೆ. ಅನ್ಯಾಯವಾಗಿದೆ ಎಂದು ನಮಗೆ ದೂರು ಬಂದಿದೆ. ಸಂತ್ರಸ್ತೆ ಮನೆಯವರ ಪರ ರಾಜಕೀಯದವರು ಯಾರೂ ನಿಲ್ಲುತ್ತಿಲ್ಲ. ಅತ್ಯಾಚಾರಕ್ಕೊಳಗಾದ ವಿದ್ಯಾರ್ಥಿನಿ ಹಿಂದೂ ಅಲ್ಲವೇ? ಅವರ ಬಳಿ ಹಣವಿಲ್ಲ ಅಂತ ಬಿಟ್ಟು ಬಿಡುವುದಾ ? ಎಂದು ಹಿಂದೂ ಸಂಘಟನೆ ಮತ್ತು ಬಿಜೆಪಿ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾನೆ

ಅಲ್ಲದೇ ಕೃಷ್ಣ ಜೆ.ರಾವ್ ಜೈಲಿನಿಂದ ಹೊರ ಬಂದ ಮೇಲೆ ಯುವತಿಯನ್ನು ಮದುವೆ ಆಗಿಲ್ಲ ಎಂದಾದರೆ ಗುಂಡು ಹೊಡೆದು ಸಾಯಿಸುವುದಾಗಿ ಎಚ್ಚರಿಕೆ ನೀಡಿದ್ದಾನೆ ಎನ್ನಲಾಗಿದೆ.


