Saturday, June 6, 2026
Homeಕರಾವಳಿಮಂಗಳೂರುಬೆಳ್ತಂಗಡಿ :  ಧರ್ಮಸ್ಥಳದಲ್ಲಿ ಮೃತದೇಹಗಳನ್ನು ಹೂತು ಹಾಕಿರೋದಾಗಿ ಹೇಳಿದ್ದ ವ್ಯಕ್ತಿ ಕೋರ್ಟ್ ನಿಂದ ನಿರ್ಗಮನ

ಬೆಳ್ತಂಗಡಿ :  ಧರ್ಮಸ್ಥಳದಲ್ಲಿ ಮೃತದೇಹಗಳನ್ನು ಹೂತು ಹಾಕಿರೋದಾಗಿ ಹೇಳಿದ್ದ ವ್ಯಕ್ತಿ ಕೋರ್ಟ್ ನಿಂದ ನಿರ್ಗಮನ

- Advertisement -
- Advertisement -

ಬೆಳ್ತಂಗಡಿ : ಧರ್ಮಸ್ಥಳ ಗ್ರಾಮದಲ್ಲಿ ಹಲವಾರು ಮೃತದೇಹಗಳನ್ನು ದಫನ ಮಾಡಿರುವುದಾಗಿ ದೂರು ನೀಡಿದ ನೀಡಿದ ವ್ಯಕ್ತಿ ಜಡ್ಜ್ ಮುಂದೆ ಜುಲೈ11 ರಂದು ಸಂಜೆ  4:40 ರಿಂದ 6 ಗಂಟೆವರೆಗೆ ಒಟ್ಟು1 ಗಂಟೆ 20 ನಿಮಿಷ ಹೇಳಿಕೆ ನೀಡಿ ಬಳಿಕ ಹೇಳಿಕೆಯ ಪತ್ರಿಗೆ ಸಹಿ ಹಾಕಿ ವಕೀಲರ ಜೊತೆ ಬೆಳ್ತಂಗಡಿ ಪೊಲೀಸ್ ಠಾಣೆಗೆ ತನಿಖೆಗಾಗಿ ಕಾರಿನಲ್ಲಿ ತೆರಳಿದ್ದಾರೆ.

ಬೆಳ್ತಂಗಡಿ ಪ್ರಧಾನ ಸಿವಿಲ್ ನ್ಯಾಯಧೀಶರು ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿ ಸಂದೇಶ್.ಕೆ ಮುಂದೆ ದೂರುದಾರ ವ್ಯಕ್ತಿ ಒಬ್ಬನೇ ಹಾಜರಾಗಿ BNS 183 ಹೇಳಿಕೆ ನೀಡಿದ್ದಾರೆ.

ಇನ್ನು ಬೆಳ್ತಂಗಡಿ ಪೊಲೀಸ್ ಠಾಣೆಗೆ ಮಂಗಳೂರು ಎಫ್ಎಸ್ ಎಲ್ ತಂಡದ ಮೂವರು ಸೋಕೋ ಸಿಬ್ಬಂದಿ ಆಗಮಿಸಿದ್ದಾರೆ.

- Advertisement -

Latest News

error: Content is protected !!