- Advertisement -
![]()
- Advertisement -
ಚಿಕ್ಕಮಗಳೂರು: ಭಕ್ತಿಯ ಭಾವನಾತ್ಮಕ ಸನ್ನಿವೇಶವೊಂದು ಇಂದು ಚಿಕ್ಕಮಗಳೂರು-ತಿರುಪತಿ ರೈಲು ಚಾಲನೆ ಕಾರ್ಯಕ್ರಮದಲ್ಲಿ ನಡೆದಿದೆ.
ತಿರುಪತಿಗೆ ಹೊರಡಲು ಹಸಿರು ನಿಶಾನೆಗಾಗಿ ಕಾಯುತ್ತಿದ್ದ ರೈಲಿನ ಹಳಿಗೆ ಇಳಿದ ಮಹಿಳೆಯೋರ್ವರು ರೈಲಿಗೆ ಮೂರು ಬಾರಿ ನಮಸ್ಕರಿಸಿ ಕಾಣಿಕೆ ಇಟ್ಟು ಭಕ್ತಿ ಪ್ರದರ್ಶಿಸಿದ್ದಾರೆ.
ಚಿಕ್ಕಮಗಳೂರು ರೈಲ್ವೇ ನಿಲ್ದಾಣದಲ್ಲಿ ಇಂದು ಚಿಕ್ಕಮಗಳೂರು-ತಿರುಪತಿ ನಡುವಿನ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲಿಗೆ ಚಾಲನೆ ನೀಡಲಾಗಿದೆ. ಕೇಂದ್ರ ರೈಲ್ವೇ ಇಲಾಖೆ ರಾಜ್ಯ ಸಚಿವ ವಿ. ಸೋಮಣ್ಣ ರೈಲಿಗೆ ಚಾಲನೆ ನೀಡಿದರು. ಸಂಸದ ಕೋಟ ಶ್ರೀನಿವಾಸ ಪೂಜಾರಿ ಮತ್ತು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಚಿಕ್ಕಮಗಳೂರಿನ ಲಕ್ಷ್ಮೀ ಬಾಯಿ ಪ್ರತಿವರ್ಷ ತಿರುಪತಿಗೆ ತೆರಳಿ ತಿಮ್ಮಪ್ಪನ ದರ್ಶನ ಮಾಡುತ್ತಿದ್ದು, ಚಿಕ್ಕಮಗಳೂರಿನಿಂದ ನೇರವಾಗಿ ತಿರುಪತಿಗೆ ರೈಲು ಸೇವೆ ಆರಂಭಿಸಿದ್ದನ್ನು ಕಂಡು ಭಾವುಕಳಾಗಿ ರೈಲಿಗೆ ನಮಸ್ಕರಿಸಿದ್ದಾರೆ.
- Advertisement -


