Wednesday, June 3, 2026
Homeಕರಾವಳಿಮಂಗಳೂರು: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ವ್ಯವಸ್ಥಾಪನಾ ಮಂಡಳಿ ಅಧ್ಯಕ್ಷ ಸ್ಥಾನ ನೇಮಕಾತಿ ವಿವಾದ ಪ್ರಕರಣ; ಇಂದು...

ಮಂಗಳೂರು: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ವ್ಯವಸ್ಥಾಪನಾ ಮಂಡಳಿ ಅಧ್ಯಕ್ಷ ಸ್ಥಾನ ನೇಮಕಾತಿ ವಿವಾದ ಪ್ರಕರಣ; ಇಂದು ಹೈಕೋರ್ಟ್ ನಲ್ಲಿ ಮುಂದುವರೆದ ವಾದ-ವಿವಾದ

- Advertisement -
- Advertisement -

ಮಂಗಳೂರು: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ವ್ಯವಸ್ಥಾಪನಾ ಮಂಡಳಿ ಅಧ್ಯಕ್ಷ ಸ್ಥಾನ ನೇಮಕಾತಿ ವಿವಾದ ಪ್ರಕರಣಕ್ಕೆ ಸಂಬಂಧಪಟ್ಟಂತೆ  ಇಂದು ಹೈಕೋರ್ಟ್ ನಲ್ಲಿ ವಾದ-ವಿವಾದ ಮುಂದುವರೆಯಿತು.

ವೆಕೇಶನ್ ಕೋರ್ಟ್ ನ ಒಂದನೇ ಬೇಂಚ್ ನಲ್ಲಿ ಪ್ರಕರಣದ ವಿಚಾರಣೆ ನಡೆಯಿತು. ಈ ವೇಳೆ ನ್ಯಾಯಾಧೀಶ ಸಿ.ಎಂ.ಜೋಶಿ. ಮೇ.29 ಕ್ಕೆ ವಿಚಾರಣೆ ಮುಂದೂಡಿದರು. ಆರೋಪಗಳ ಬಗ್ಗೆ ದಾಖಲೆ ಸಲ್ಲಿಸುವಂತೆ ಸರ್ಕಾರಕ್ಕೆ, ಹೈಕೋರ್ಟ್ ಸೂಚನೆ ನೀಡಿದೆ.

ಹರೀಶ್ ಇಂಜಾಡಿ ಮೇಲಿನ ಮಾಡಿರೋ ಆರೋಪಗಳು ನಿಜಾನಾ, ಸುಳ್ಳಾ ಅಂತಾ ದಾಖಲೆ ನೀಡಲು ಹೈಕೋರ್ಟ್ ಸರ್ಕಾರಕ್ಕೆ ಸೂಚನೆ ನೀಡಿದೆ.. ರೌಡಿಶೀಟರ್ ಆಗಿದ್ದರೆ ಅದರ ದಾಖಲೆ, ಕ್ರಿಮಿನಲ್ ಪ್ರಕರಣಗಳಿದ್ದರೆ, ಆಡಳಿತ ಮಂಡಳಿಗೆ ಮೋಸ ಮಾಡಿದ್ದರೆ ಎಲ್ಲಾ ದಾಖಲೆ ನೀಡಲು ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ.

ದೂರದಾರ ಪರ ವಕೀಲರಿಗೂ ಪೂರಕವಾದ ಹೆಚ್ಚುವರು ದಾಖಲೆ ಹಾಜರುಪಡಿಸಲು ಸೂಚನೆ‌ ನೀಡಿದ್ದಾರೆ. ಇನ್ನು ಹಿರಿಯ ವಕೀಲ ವಿವೇಕ್ ಸುಬ್ಬಾರೆಡ್ಡಿ  ದೂರುದಾರ ಆಕಾಶ್ ಕುಮಾರ್ ಪರ ವಾದ ಮಂಡಿಸುತ್ತಿದ್ದಾರೆ.

- Advertisement -

Latest News

error: Content is protected !!