Wednesday, June 3, 2026
HomeUncategorizedಕಡಬ: ಖಾಸಗಿ ವಿದ್ಯಾಸಂಸ್ಥೆಯ ಕಟ್ಟಡ ತೆರವು ವೇಳೆ ಗೋಡೆ ಕುಸಿತ: ಇಬ್ಬರಿಗೆ ಗಾಯ

ಕಡಬ: ಖಾಸಗಿ ವಿದ್ಯಾಸಂಸ್ಥೆಯ ಕಟ್ಟಡ ತೆರವು ವೇಳೆ ಗೋಡೆ ಕುಸಿತ: ಇಬ್ಬರಿಗೆ ಗಾಯ

- Advertisement -
- Advertisement -

ಕಡಬ: ಖಾಸಗಿ ವಿದ್ಯಾಸಂಸ್ಥೆಯ ಕಟ್ಟಡ ತೆರವು ವೇಳೆ ಗೋಡೆ ಕುಸಿತವಾಗಿ ಇಬ್ಬರಿಗೆ ಗಾಯಗಳಾಗಿರುವ ಘಟನೆ ಕಡಬ-ಪಂಜ ರಸ್ತೆಯ ವಿದ್ಯಾನಗರದಲ್ಲಿರುವ ಸರಸ್ವತಿ ವಿದ್ಯಾಮಂದಿರದಲ್ಲಿ ನಡೆದಿದೆ.

ಶಾಲೆಯ ಆವರಣದಲ್ಲಿರುವ ಕಟ್ಟಡವನ್ನು  ಜೆಸಿಬಿ ಮೂಲಕ  ಅರ್ಧ ತೆರವಿಗೊಳಿಸುತ್ತಿದ್ದರು.ಆ ವೇಳೆ ಸ್ಥಳದಲ್ಲಿದ್ದ ಇಬ್ಬರು ಗೋಡೆ ಬಳಿ ತೆರವು ಕಾರ್ಯಕ್ಕೆ ಮುಂದಾದ ವೇಳ  ಏಕಾಏಕಿ  ಗೋಡೆ ಕುಸಿದು ಬಿದ್ದಿದೆ ಎನ್ನಲಾಗಿದೆ.

ಹೊಸ್ಮಠ ಮೂಲದವರು ತೆರವು ಮಾಡಿ ಕಳಂಜಕ್ಕೆ ಕಟ್ಟಡದ ಪರಿಕರಗಳನ್ನು ಕೊಂಡೊಯ್ಯಲು ಸಿದ್ದತೆ ಮಾಡುತ್ತಿದ್ದರು ಎನ್ನಲಾಗಿದೆ. ಗಾಯಗೊಂಡ ಇಬ್ಬರ ಪೈಕಿ  ಓರ್ವ ಪುತ್ತೂರು ಆಸ್ಪತ್ರೆಗೆ ದಾಖಲಾದರೆ ಮತ್ತೋರ್ವರನ್ನು  ಮಂಗಳೂರಿಗೆ ದಾಖಲಿಸಲಾಗಿದೆ ಎನ್ನಲಾಗಿದೆ.

- Advertisement -

Latest News

error: Content is protected !!