Wednesday, June 3, 2026
Homeಕರಾವಳಿಸಂಡೇ ಲಾಕ್ ಡೌನ್ ಮಧ್ಯೆಯೂ ವಿಖಾಯ ರಕ್ತದಾನಿ ಬಳಗದಿಂದ ರಕ್ತದಾನ

ಸಂಡೇ ಲಾಕ್ ಡೌನ್ ಮಧ್ಯೆಯೂ ವಿಖಾಯ ರಕ್ತದಾನಿ ಬಳಗದಿಂದ ರಕ್ತದಾನ

- Advertisement -
- Advertisement -

ಮಂಗಳೂರು : ಇಂದು ರಾಜ್ಯದಾದ್ಯಂತ ಭಾನುವಾರದ ಲಾಕ್ ಡೌನ್ ಜಾರಿಯಲ್ಲಿದ್ದರೂ, ಅದರ ಮಧ್ಯೆಯೇ ದಕ್ಷಿಣಕನ್ನಡ ಜಿಲ್ಲೆಯ ವಿಖಾಯ ರಕ್ತದಾನಿ ಬಳಗದ ಸದಸ್ಯರು ತಮ್ಮನ್ನು ತಾವು ಸಮಾಜಮುಖಿ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಲಾಕ್ ಡೌನ್ ನಡುವೆಯೂ ರಕ್ತದಾನ ಮಾಡಿ ಮಾನವೀಯತೆ ಮೆರೆದಿದ್ದಾರೆ.

ಮಂಗಳೂರಿನ ಎ.ಜೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಾರ್ಕಳದ ಬಜಗೊಳಿ ನಿವಾಸಿಯಾಗಿರುವ ಕರುಣಾಕರ ಹೆಗ್ಡೆ ಎಂಬವರಿಗೆ, ಕುದ್ರೋಳಿ ಎಸ್ ಕೆ ಎಸ್ ಎಸ್ ಎಫ್ ಸದಸ್ಯರು ಎ ಪಾಸಿಟಿವ್ ನ 3 ಯೂನಿಟ್ ರಕ್ತದಾನ ಮಾಡಿದ್ದಾರೆ. ಎಸ್ ಕೆ ಎಸ್ ಎಸ್ ಎಫ್ ಸದಸ್ಯರು ಹಾಗೂ ವಿಖಾಯ ರಕ್ತದಾನಿ ಬಳಗದ ಸದಸ್ಯರು ಆಗಿರುವ ಆಸಿಫ್ ಎನ್.ಕೆ, ಉಮರುಲ್ ಫಾರೂಕ್ ಹಾಗೂ ವಲಚ್ಚಿಲ್ ಎಸ್ ಕೆ ಎಸ್ ಎಸ್ ಎಫ್ ಶಾಖೆಯ ಸದಸ್ಯರಾದ ದಾವುದುಲ್ ಹಕೀಮ್, ಅವರು ರಕ್ತದಾನ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಇವರ ಕಾರ್ಯಕ್ಕೆ ದಕ್ಷಿಣಕನ್ನಡ ಜಿಲ್ಲೆಯ ವಿಖಾಯ ರಕ್ತದಾನಿ ಬಳಗ ಅಭಿನಂದನೆಯನ್ನು ಸಲ್ಲಿಸಿದೆ.

- Advertisement -

Latest News

error: Content is protected !!