Saturday, June 13, 2026
Homeತಾಜಾ ಸುದ್ದಿರೇಪ್ ಮತ್ತು ಆಸಿಡ್ ದಾಳಿ ಮಾಡುತ್ತೇನೆಂದು ನಟಿಗೆ ಬೆದರಿಕೆ: ಆರೋಪಿಯ ಬಂಧನ

ರೇಪ್ ಮತ್ತು ಆಸಿಡ್ ದಾಳಿ ಮಾಡುತ್ತೇನೆಂದು ನಟಿಗೆ ಬೆದರಿಕೆ: ಆರೋಪಿಯ ಬಂಧನ

- Advertisement -
- Advertisement -

ಕೊಲ್ಕತ್ತಾ: ಸಾಮಾಜಿಕ ಜಾಲತಾಣ ಫೇಸ್ಬುಕ್ ನಲ್ಲಿ ನಟಿ ಸ್ವಸ್ತಿಕ ಮುಖರ್ಜಿಗೆ ಅತ್ಯಾಚಾರ ಹಾಗೂ ಆಸಿಡ್ ದಾಳಿ ಬೆದರಿಕೆ ಹಾಕ್ತಿದ್ದ ಆರೋಪಿಯನ್ನು ಕೊಲ್ಕತ್ತಾ ಸೈಬರ್ ಅಪರಾಧ ಇಲಾಖೆ ಪೊಲೀಸರು ಬಂಧಿಸಿದ್ದಾರೆ.

ಹೂಗ್ಲಿ ನಿವಾಸಿ ಕೌಶಿಕ್ ದಾಸ್ ನನ್ನು ಬಂಧಿತ ವ್ಯಕ್ತಿ. ಜೂನ್ 26ರಂದು ದಿಲ್ ಬೇಚಾರಾ ಸಹ ನಟ ಸುಶಾಂತ್ ಆತ್ಮಹತ್ಯೆ ಮಾಡಿಕೊಂಡ ಕೆಲ ದಿನಗಳ ನಂತ್ರ `ಆತ್ಮಹತ್ಯೆ ಈಗ ಫ್ಯಾಷನ್ ಆಗಿದೆ’ ಎಂದು ನಾನು ಹೇಳಿದ್ದೇನೆಂದು ಸುದ್ದಿಯಾಗಿತ್ತು. ಆನ್ಲೈನ್ ನಲ್ಲಿ ನನ್ನ ಮೇಲೆ ಆರೋಪ ಮಾಡಲಾಗಿತ್ತು. ಅತ್ಯಾಚಾರ, ಸಾವಿನ ಬೆದರಿಕೆ ಬಂದಿತ್ತು ಎಂದು ಫೇಸ್ಬುಕ್ ನಲ್ಲಿ ಶುಕ್ರವಾರ ತಿಳಿಸಿದ್ದಾರೆ.

ಇದಲ್ಲದೆ ನಕಲಿ ಸುದ್ದಿ ನೀಡಿದ್ದ ಬಂಗಾಳದ ಬರ್ಧಾಮನ್‌ ಶುಭಮ್ ಚಕ್ರವರ್ತಿಯನ್ನು ಕೋಲ್ಕತಾ ಸೈಬರ್ ಅಪರಾಧ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ. ಅವರು ನ್ಯೂಸ್ ಪೋರ್ಟಲ್ ನಲ್ಲಿ ತಪ್ಪು ಸುದ್ದಿಗಳನ್ನು ನೀಡಿದ್ದರು. ಅದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆಂದು ನಟಿ ಹೇಳಿದ್ದಾರೆ. ನಕಲಿ ಸುದ್ದಿ ನಂತ್ರ ಕೌಶಿಕ್, ಆಸಿಡ್ ದಾಳಿ, ಆತ್ಮಹತ್ಯೆ ಬೆದರಿಕೆ ಹಾಕಿದ್ದ ಎನ್ನಲಾಗಿದೆ.

- Advertisement -

Latest News

error: Content is protected !!