Sunday, May 19, 2024
Homeಕರಾವಳಿಮಹಾರಾಷ್ಟ್ರದಲ್ಲಿ ವೈರಲ್ ಆದ ಸವಣಾಲಿನ ವೃದ್ಧೆಯ ವಿಡಿಯೋ ಬೆಳ್ತಂಗಡಿ ಪೊಲೀಸರಿಗೆ ತಲುಪಿದ್ದು ಹೇಗೆ ?

ಮಹಾರಾಷ್ಟ್ರದಲ್ಲಿ ವೈರಲ್ ಆದ ಸವಣಾಲಿನ ವೃದ್ಧೆಯ ವಿಡಿಯೋ ಬೆಳ್ತಂಗಡಿ ಪೊಲೀಸರಿಗೆ ತಲುಪಿದ್ದು ಹೇಗೆ ?

spot_img
- Advertisement -
- Advertisement -

ಬೆಳ್ತಂಗಡಿ: ಜುಲೈ 17 ರಂದು ತಾಲೂಕಿನ ಸವಣಾಲಿನ ವಯೋವೃದ್ಧೆಗೆ ಮಗ ಮತ್ತು ಮೊಮ್ಮಗ ಸೇರಿ ಹಲ್ಲೆ ಮಾಡಿರುವ ವಿಡಿಯೋ ಒಂದು ವೈರಲ್ ಆಗಿತ್ತು. ವಿಡಿಯೋ ಗಮನಿಸಿ ಮಧ್ಯ ಪ್ರವೇಶಿಸಿದ ಶಾಸಕ ಹರೀಶ್ ಪೂಂಜ ಮತ್ತು ಬೆಳ್ತಂಗಡಿ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ನಂದಕುಮಾರ್ ಕೂಡಲೇ ಸ್ವಯಂ ಪ್ರೇರಿತರಾಗಿ ಹಲ್ಲೆಯ ಕುರಿತು ದೂರು ದಾಖಲಿಸಿ ಮಗ ಮತ್ತು ಮೊಮ್ಮಗನನ್ನು ಬಂಧಿಸಿದ್ದಾರೆ.

ಆದರೆ ವಿಡಿಯೋ ವೈರಲ್ ಆಗಿರುವ ಹಿಂದೆ ಕಾಣದ ಕೈಯೊಂದು ದೂರದ ಮಹಾರಾಷ್ಟ್ರದ ಪುಣೆ ನಗರದಿಂದ ಕೆಲಸ ಮಾಡಿದೆ ಎಂದರೆ ನೀವು ನಂಬಲೇಬೇಕು. ಹೌದು, ವಯೋವೃದ್ಧೆಗೆ ಮಗ ಶ್ರೀನಿವಾಸ ಹಲ್ಲೆ ಮಾಡುವುದನ್ನು ವಿಡಿಯೋ ರೆಕಾರ್ಡ್ ಮಾಡಿದ್ದು ಶ್ರೀನಿವಾಸನ ತಮ್ಮನ ಮಗ. ನಂತರ ವಿಡಿಯೋ ಹೇಗೋ ಹೋಗಿ ತಲುಪ್ಪಿದ್ದು, ಅಂತರಾಷ್ಟ್ರೀಯ ಮಾನವ ಹಕ್ಕು ಸಂಸ್ಥೆಯ ದಕ್ಷಿಣ ಭಾರತೀಯ ಪ್ರಭಾರಿ, ಭ್ರಷ್ಟಚಾರ ನಿಗ್ರಹ ಮತ್ತು ಅಪರಾಧ ನಿಯಂತ್ರಣ ಸಂಸ್ಥೆಯ ರಾಷ್ಟ್ರೀಯ ಪರಿವೀಕ್ಷಕಿ ಗೀತಾ ಶೆಟ್ಟಿಯವರಿಗೆ.

ಗೀತಾ ಶೆಟ್ಟಿ

ವಿಡಿಯೋವನ್ನು ತಮ್ಮ ಮೊಬೈಲ್ ಗೆ ಬಂದ ತಕ್ಷಣ, ಇದು ಎಲ್ಲಿಂದ ಬಂದ ವಿಡಿಯೋ ಮತ್ತು ಇತ್ತೀಚಿನ ವಿಡಿಯೋವೇ ಅಥವಾ ಹಳೆ ವಿಡಿಯೋವ ಎಂದು ಗೀತಾ ಶೆಟ್ಟಿಯವರು ಪ್ರಾಥಮಿಕ ತನಿಖೆ ನಡೆಸಿದ್ದಾರೆ. ನಂತರ ಇಂದು ಬೆಳ್ತಂಗಡಿಯ ಸವಣಾಲಿನ ವಿಡಿಯೋ ಎಂದು ತಿಳಿಯಿತು. ವಿಡಿಯೋವನ್ನು ಈಗಲೇ ಎಲ್ಲರಿಗೂ ಹರಿಬಿಟ್ಟರೆ, ಹಲ್ಲೆ ಮಾಡಿರುವ ವ್ಯಕ್ತಿಗಳು ಪರಾರಿಯಾಗುವ ಅಥವಾ ವಾಮಮಾರ್ಗಗಳಿಂದ ಕಾನೂನಿನ ಕೈಯಿಂದ ತಪ್ಪಿಸುವ ಸಾಧ್ಯತೆ ಇದೆ ಎಂದು ತಿಳಿದ ಗೀತಾ ಶೆಟ್ಟಿಯವರು ಸಂಯಮದಿಂದ ವರ್ತಿಸಿದ್ದಾರೆ.

ನಂತರ ಗೀತಾ ಶೆಟ್ಟಿಯವರು ಸವಣಾಲು ಗ್ರಾಮದ ಸ್ಥಳೀಯರನ್ನು ಸಂಪರ್ಕಿಸಿ ಬೆಳ್ತಂಗಡಿ ಪೋಲೀಸರ ಮಾಹಿತಿಯನ್ನು ಪಡೆದುಕೊಂಡಿದ್ದಾರೆ. ಸ್ಥಳೀಯರು ನೀಡಿದ ಮಾಹಿತಿಯಂತೆ ಬೆಳ್ತಂಗಡಿ ಸಬ್ ಇನ್ಸ್ಪೆಕ್ಟರ್ ನಂದಕುಮಾರ್ ರನ್ನು ದೂರವಾಣಿ ಮೂಲಕ ಸಂಪರ್ಕಿಸಿ ವಿಡಿಯೋ ಮತ್ತು ಆರೋಪಿಗಳ ಮಾಹಿತಿ ನೀಡಿದ್ದಾರೆ.

ಕೂಡಲೇ ಕಾರ್ಯಪ್ರವೃತ್ತರಾದ ಬೆಳ್ತಂಗಡಿ ಸಬ್ ಇನ್ಸ್ಪೆಕ್ಟರ್ ನಂದಕುಮಾರ್ ಸ್ವಯಂ ಪ್ರೇರಿತರಾಗಿ ಕೇಸು ದಾಖಲಿಸಿ ಆರೋಪಿಗಳನ್ನು ಬಂಧಿಸಿದ್ದಾರೆ ಮತ್ತು ಕಾರ್ಯದ ಒತ್ತಡದ ನಡುವೆ ಬೆಂಗಳೂರಿನಲ್ಲಿ ಇದ್ದ ಶಾಸಕ ಹರೀಶ್ ಪೂಂಜಾ ಅವರು ತಮ್ಮ ಆಪ್ತರ ಮೂಲಕ ಚಿಕಿತ್ಸೆಗೆ ನೆರವಾದರು .
ಪುಣೆಯಲ್ಲೇ ಇದ್ದುಕೊಂಡು ವಯೋವೃದ್ದೆ ಅಪ್ಪಿ ಶೆಡ್ತಿಯ ಕಣ್ಣೀರು ಒರೆಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ ಅಂತರಾಷ್ಟ್ರೀಯ ಮಾನವ ಹಕ್ಕು ಸಂಸ್ಥೆಯ ದಕ್ಷಿಣ ಭಾರತೀಯ ಪ್ರಭಾರಿ ಮತ್ತು ಭ್ರಷ್ಟಚಾರ ನಿಗ್ರಹ ಮತ್ತು ಅಪರಾಧ ನಿಯಂತ್ರಣ ಸಂಸ್ಥೆಯ ರಾಷ್ಟ್ರೀಯ ಪರಿವೀಕ್ಷಕಿ ಗೀತಾ ಶೆಟ್ಟಿಯವರ ಶ್ರಮಕ್ಕೆ ಎಲ್ಲ ಕಡೆಯಿಂದ ಮೆಚ್ಚುಗೆಯ ಮಾತುಗಳು ಕೇಳಿ ಬರುತ್ತಿವೆ.

- Advertisement -
spot_img

Latest News

error: Content is protected !!