Saturday, June 6, 2026
Homeಉದ್ಯಮಖಾತೆದಾರರ ಅನುಮತಿಯಿಲ್ಲದೆ ಖಾತೆಯಿಂದ ಹಣ ವಾಪಸ್‌ ಪಡೆದ ಪ್ರಕರಣ: ಗ್ರಾಹಕ ನ್ಯಾಯಾಲಯದಿಂದ ಬ್ಯಾಂಕ್‌ಗೆ ದಂಡ

ಖಾತೆದಾರರ ಅನುಮತಿಯಿಲ್ಲದೆ ಖಾತೆಯಿಂದ ಹಣ ವಾಪಸ್‌ ಪಡೆದ ಪ್ರಕರಣ: ಗ್ರಾಹಕ ನ್ಯಾಯಾಲಯದಿಂದ ಬ್ಯಾಂಕ್‌ಗೆ ದಂಡ

- Advertisement -
- Advertisement -

ಮಂಗಳೂರು: ಗ್ರಾಹಕ ನ್ಯಾಯಾಲಯವು ಖಾತೆದಾರರ ಅನುಮತಿಯಿಲ್ಲದೆ ಖಾತೆಯಿಂದ ಹಣ ವಾಪಸ್‌ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಕೃತ ಬ್ಯಾಂಕ್‌ಗೆ 30 ಸಾವಿರ ರೂ. ದಂಡ ವಿಧಿಸಿದೆ.

ಗ್ರಾಹಕ ನ್ಯಾಯಾಲಯಕ್ಕೆ ಬ್ಯಾಂಕ್ ನ ವಿರುದ್ಧ ದೂರನ್ನು ನೀಡಿದವರು ಸಂದೇಶ್‌ ಮಹಾಬಲ ಶೆಟ್ಟಿ. 

ಪ್ರಕಣದ ವಿವರ: ಬಿಕರ್ನಕಟ್ಟೆಯಲ್ಲಿ ತುಳುನಾಡು ಚಿಟ್ಸ್‌ ವ್ಯವಹಾರ ನಡೆಸುತ್ತಿದ್ದು, ರೀತು ಪ್ರಭಾಕರ್‌ ಎಂಬುವವರು ಕಂತಿನ ಹಣ ಪಾವತಿಸದೇ ಇದ್ದು, ಈ ಕಾರಣ ಜಾಮೀನುದಾರ ಜಯಶಂಕರ್‌ ಅವರು 90 ಸಾವಿರ ರೂ. ಮೊತ್ತದ ಚೆಕ್‌ ನೀಡಿದ್ದರು. ಅದನ್ನು ದೂರುದಾರರು ಬ್ಯಾಂಕ್‌ಗೆ ನಗದೀಕರಿಸಲು ಹಾಕಿದ್ದರು. ಖಾತೆಗೆ ಹಣ ಜಮೆ ಆಗಿತ್ತು. ಆದರೆ ಇಲ್ಲಿ ಜಾಮೀನುದಾರನ ಖಾತೆಗೆ ಬ್ಯಾಂಕ್ ಮ್ಯಾನೇಜರ್‌ರ ಕಾರಣದಿಂದ ಹಣ ವಾಪಸ್‌ ಜಮೆಯಾಗಿತ್ತು.

ಬ್ಯಾಂಕ್ ಮ್ಯಾನೇಜರ್ ಅನ್ನು ಈ ಬಗ್ಗೆ ಸಂದೇಶ್‌ ಮಹಾಬಲ ಶೆಟ್ಟಿ ಅವರು ಪ್ರಶ್ನಿಸಿದಾಗ ಸರಿಯಾಗಿ ಪ್ರತಿಕ್ರಿಯಿಸಿರಲಿಲ್ಲ. ಈ ನಿಟ್ಟಿನಲ್ಲಿ ಗ್ರಾಹಕ ನ್ಯಾಯಾಲಯಕ್ಕೆ ದೂರು ನೀಡಲಾಗಿತ್ತು. ಇದೀಗ ಗ್ರಾಹಕ ನ್ಯಾಯಾಲಯ ಪ್ರಕರಣಕ್ಕೆ ಸಂಬಂಧಿಸಿದಂತೆ ಖಾತೆಗೆ ಜಮೆಯಾದ ಹಣವನ್ನು ವಾಪಸ್‌ ಜಾಮೀನುದಾರನ ಖಾತೆಗೆ ಜಮೆ ಮಾಡಿರುವುದು ಸರಿಯಲ್ಲ ಎಂದು ತೀರ್ಪು ನೀಡಿ ತಪ್ಪಿತಸ್ಥ ಬ್ಯಾಂಕ್‌ಗೆ 30 ಸಾವಿರ ರೂ. ದಂಡ ವಿಧಿಸಿದೆ. ಅಷ್ಟೇಅಲ್ಲದೆ ತೀರ್ಪು ಹೊರಬಿದ್ದ 45 ದಿನಗಳೊಳಗೆ ಪಾವತಿಸುವಂತೆ ಆದೇಶಿಸಿದೆ.

ಇನ್ನು ದೂರುದಾರರ ಖಾತೆಗೆ ಬರಬೇಕಾದ 90 ಸಾವಿರ ರೂ. ಮೊತ್ತಕ್ಕೆ ಸಿವಿಲ್‌ ನ್ಯಾಯಾಲಯದಲ್ಲಿ ದಾವೆ ಹೂಡುವಂತೆ ನಿರ್ದೇಶಿಸಿದೆ.

- Advertisement -

Latest News

error: Content is protected !!