Saturday, June 6, 2026
Homeತಾಜಾ ಸುದ್ದಿರಾಜ್ಯದ ಜನರಿಗೆ ಕರೆಂಟ್ ಶಾಕ್ ನೀಡಿದ ಕೆಇಆರ್ ಸಿ

ರಾಜ್ಯದ ಜನರಿಗೆ ಕರೆಂಟ್ ಶಾಕ್ ನೀಡಿದ ಕೆಇಆರ್ ಸಿ

- Advertisement -
- Advertisement -

ಬೆಂಗಳೂರು; ರಾಜ್ಯದ ಜನರಿಗೆ ಕೆಇಆರ್ ಸಿ ಕರೆಂಟ್ ಶಾಕ್ ನೀಡಿದೆ. ಪ್ರತಿ ಯೂನಿಟ್ ಗೆ 36 ಪೈಸೆ ಹೆಚ್ಚಳ ಮಾಡಿ ಕೆಇಆರ್ ಸಿ ಆದೇಶಿಸಿದೆ.

ವಿದ್ಯತ್ ಪ್ರಸರಣ ಮತ್ತು ಎಸ್ಕಾಮ‌್ ಸಿಬ್ಬಂದಿಯ ಪಿಂಚಿಣಿ ಹಾಗೂ ಗ್ರಾಚ್ಯುಟಿ ಗ್ರಾಹಕರಿಂದಲೇ ವಸೂಲಿಗೆ 36 ಪೈಸೆ ಆದೇಶ ನೀಡಲಾಗಿದೆ. ಎಪ್ರಿಲ್ 1 ರಿಂದಲೇ ಹೊಸ ಆದೇಶ ಜಾರಿಯಾಗಲಿದೆ.

2025-26 ರಲ್ಲಿ 36 ಪೈಸೆ, 2026-27 ರಲ್ಲಿ 35 ಪೈಸೆ, 2027-28 ರಲ್ಲಿ 34 ಪೈಸೆ ಹೆಚ್ಚುವರಿಯಾಗಿ ವಿಧಿಸಲು ಆದೇಶ ನೀಡಲಾಗಿದೆ. ದರ ಹೆಚ್ಚಳದಿಂದ ಮುಂದಿನ ಮೂರು ವರ್ಷದಲ್ಲಿ 8519 ಕೋಟಿ ವಸೂಲಿಯಾಗಲಿದೆ. ಈಗಾಗಲೇ ವಿದ್ಯುತ್ ಸಂಸ್ಥೆಗಳು 4659 ಕೋಟಿ ಪಿಂಚಿಣಿ- ಗ್ರಾಚ್ಯುಟಿ ಹಿಂಬಾಕಿ ಉಳಿಸಿಕೊಂಡಿವೆ.

- Advertisement -

Latest News

error: Content is protected !!