Sunday, June 7, 2026
Homeಕರಾವಳಿಮಂಗಳೂರುಬೆಳ್ತಂಗಡಿ : ಮರದ ಕೊಂಬೆ ಮುರಿದು ಬಿದ್ದು ಬೈಕ್ ಸವಾರ ಸಾವು

ಬೆಳ್ತಂಗಡಿ : ಮರದ ಕೊಂಬೆ ಮುರಿದು ಬಿದ್ದು ಬೈಕ್ ಸವಾರ ಸಾವು

- Advertisement -
- Advertisement -

ಬೆಳ್ತಂಗಡಿ : ಜಾರಿಗೆ ಬೈಲು ಎಂಬಲ್ಲಿ ರಾಜ್ಯ ಹೆದ್ದಾರಿ ಬದಿಯ ಮಾವಿನ ಮರದ ಕೊಂಬೆ ಬಿದ್ದು ಬೈಕ್ಕಲ್ಲಿ ಬರುತ್ತಿದ್ದ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಮಾ 20 ಗುರುವಾರ ಸಂಜೆ 8 ಗಂಟೆಗೆ ನಡೆದಿದೆ.

ಮೃತ ಯುವಕನನ್ನು ಬೆಳ್ತಂಗಡಿ ತಾಲೂಕಿನ ಬೆಳಾಲು ನಿವಾಸಿ ಸಂಜೀವ ಮುಗೇರ ಮತ್ತು ಲಲಿತಾ ದಂಪತಿಯ ಹಿರಿಯ ಪುತ್ರ ಪ್ರವೀಣ್.ಎಸ್.ಎಲ್ (25) ಗುರುತಿಸಲಾಗಿದೆ.

ಮಂಗಳೂರಿನ HDFC ಬ್ಯಾಂಕ್ ನಲ್ಲಿ ಲೋನ್ ಸೆಕ್ಷನ್ ನಲ್ಲಿ ಕೆಲಸ ಮಾಡುತಿದ್ದ ಬೆಳಾಲಿನ ಪ್ರವೀಣ್ ಅವರು ಕೆಲಸ ಮುಗಿಸಿಕೊಂಡು ಉಪ್ಪಿನಂಗಡಿ ಗುರುವಾಯನಕೆರೆ ರಾಜ್ಯ ಹೆದ್ದಾರಿಯ ಕಳಿಯ ಗ್ರಾಮದ ಬರುತ್ತಿದ್ದ ವೇಳೆ ಜಾರಿಗೆ ಬೈಲು ಎಂಬಲ್ಲಿ ರಸ್ತೆ ಬದಿಯ ಮಾವಿನ ಮರದ ಗೆಲ್ಲು ಮುರಿದು ಅವರ ಬೈಕ್ ಮೇಲೆ ಬಿದ್ದು ಗಂಭೀರ ಗಾಯಗೊಂಡಿದ್ದು, ತಕ್ಷಣ ಸ್ಥಳೀಯರು ಬೆಳ್ತಂಗಡಿ ಸರ್ಕಾರಿ ತರುವಷ್ಟರಲ್ಲೇ ಸಾವನ್ನಪ್ಪಿದ್ದಾರೆ. ಮೃತದೇಹ ಬೆಳ್ತಂಗಡಿ ತಾಲೂಕು ಸರಕಾರಿ ಆಸ್ಪತ್ರೆಯಲ್ಲಿದ್ದು.ಈ ಬಗ್ಗೆ ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!