Wednesday, June 3, 2026
Homeಉತ್ತರ ಕನ್ನಡಕಾರವಾರ: ದನ ಕಳ್ಳತನ ಮಾಡಿದರೆ ಸರ್ಕಲ್‌ನಲ್ಲಿ ನಿಲ್ಲಿಸಿ ಗುಂಡು ಹಾರಿಸಲಾಗುತ್ತೆ; ಗೋ ಕಳ್ಳರಿಗೆ ಕಾಂಗ್ರೆಸ್ ಶಾಸಕ...

ಕಾರವಾರ: ದನ ಕಳ್ಳತನ ಮಾಡಿದರೆ ಸರ್ಕಲ್‌ನಲ್ಲಿ ನಿಲ್ಲಿಸಿ ಗುಂಡು ಹಾರಿಸಲಾಗುತ್ತೆ; ಗೋ ಕಳ್ಳರಿಗೆ ಕಾಂಗ್ರೆಸ್ ಶಾಸಕ ಖಡಕ್ ಎಚ್ಚರಿಕೆ

- Advertisement -
- Advertisement -

ಕಾರವಾರ: ದನ ಕಳ್ಳತನ ಮಾಡಿದರೆ ಸರ್ಕಲ್‌ನಲ್ಲಿ ನಿಲ್ಲಿಸಿ ಗುಂಡು ಹಾರಿಸಲಾಗುತ್ತೆ ಎಂದು ಗೋ ಕಳ್ಳರಿಗೆ ಕಾಂಗ್ರೆಸ್ ಶಾಸಕ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.

ಉತ್ತರಕನ್ನಡ ಜಿಲ್ಲೆ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಸುದ್ದಿಗೋಷ್ಟಿಯಲ್ಲಿ ಗೋಕಳ್ಳರಿಗೆ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.ನಮ್ಮ ಸರಕಾರವು ದನಗಳನ್ನು ಕಳ್ಳತನ ಮಾಡಿದವರನ್ನು ಹಿಡಿದು ಪ್ರಕರಣ ದಾಖಲಿಸಿ, ಜೈಲಿಗೆ ಕಳಿಸಿದೆ. ಕಾನೂನು ಉಲ್ಲಂಘಿಸಿದವರನ್ನು ಹೇಗೆ ಶಿಕ್ಷಿಸಿದ್ದೇವೆ ಎಂಬುದನ್ನು ಸಮಾಜ ನೋಡಿದೆ.

ಇನ್ಮುಂದೆ ಗೋ ಕಳ್ಳತನ ಮಾಡಿದರೆ ಸರ್ಕಲ್‌ನಲ್ಲಿ ನಿಲ್ಲಿಸಿ ಗುಂಡು ಹಾರಿಸಲಾಗುವುದು ಎಂದಿದ್ದಾರೆ. ಮುಖ್ಯಮಂತ್ರಿ, ಗೃಹ ಸಚಿವರ ಬಗ್ಗೆ ಕುಮಟಾ ಶಾಸಕ ದಿನಕರ ಶೆಟ್ಟಿ ಹಗುರವಾಗಿ ಮಾತಾಡಿದ್ದಾರೆ. ಬಿಜೆಪಿ ಸರಕಾರದ ಇದ್ದಾಗ ನಡೆದ ದನಗಳ್ಳರ ವಿರುದ್ಧ ಏನೂ ಕ್ರಮ ಕೈಗೊಂಡಿಲ್ಲ ಎಂದು ಹೇಳಿದ್ದಾರೆ.

- Advertisement -

Latest News

error: Content is protected !!