Thursday, June 4, 2026
Homeಕರಾವಳಿಮಂಗಳೂರುಮಂಗಳೂರು; ಪೊಲೀಸ್ ಜೀಪ್‌ನಿಂದಲೇ ವಾಕಿ ಟಾಕಿ ಕಳ್ಳತನ

ಮಂಗಳೂರು; ಪೊಲೀಸ್ ಜೀಪ್‌ನಿಂದಲೇ ವಾಕಿ ಟಾಕಿ ಕಳ್ಳತನ

- Advertisement -
- Advertisement -

ಮಂಗಳೂರು; ಪೊಲೀಸ್ ಜೀಪ್‌ನಿಂದಲೇ ವಾಕಿ ಟಾಕಿ ಕಳ್ಳತನ ಮಾಡಿರುವ ಘಟನೆ ಉಳ್ಳಾಲದಲ್ಲಿ ನಡೆದಿದೆ.ಉಳ್ಳಾಲ ಠಾಣೆಯ ಪಿಎಸ್‌ಐ ಧನರಾಜ್ ಎಸ್ ಅವರು ರಾತ್ರಿ ರೌಂಡ್ಸ್ ಕರ್ತವ್ಯಕ್ಕೆ ಹೊರಡುವಾಗ ಅವರಲ್ಲಿದ್ದ ವಾಕಿಟಾಕಿಗೆ ಚಾರ್ಜ್ ಇಲ್ಲದ ಕಾರಣ ಇನ್ನೊಂದು ಡಿಜಿಟಲ್ ವಾಕಿಟಾಕಿ ಒಯ್ದಿದ್ದರು.

ಇಲಾಖೆಯ ಜೀಪನ್ನು ಪಿಎಸ್‌ಐ ಚಲಾಯಿಸಿಕೊಂಡು ಹೋಗುತ್ತಿದ್ದಾಗ ಕಲ್ಲಾಪು ಬಳಿ, ಜನರು ಗುಂಪು ಸೇರಿ, ವಾಹನ ಸಂಚಾರ ಅಸ್ತವ್ಯಸ್ತಗೊಂಡಿರುವುದನ್ನು ಗಮನಿಸಿದ್ದಾರೆ ಪಿಎಸ್‌ಐ ಜೀಪ್ ನಿಲ್ಲಿಸಿ, ವಾಕಿಟಾಕಿಯನ್ನು ಸೀಟ್‌ನಲ್ಲಿಟ್ಟು ಜನರನ್ನು ಚದುರಿಸಿ ಬಂದು ನೋಡಿದಾಗ ವಾಕಿಟಾಕಿ ಇರಲಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.

- Advertisement -

Latest News

error: Content is protected !!