Wednesday, June 3, 2026
Homeಕರಾವಳಿಮಂಗಳೂರು; ವಿದೇಶದಲ್ಲಿ ಕೆಲಸ ಇದೆ ಎಂದು ನಕಲಿ ಕಂಪನಿಯ ಸರ್ಟಿಫಿಕೇಟ್ ಕಳುಹಿಸಿ ಹಣ ಪಡೆದು ವಂಚನೆ...

ಮಂಗಳೂರು; ವಿದೇಶದಲ್ಲಿ ಕೆಲಸ ಇದೆ ಎಂದು ನಕಲಿ ಕಂಪನಿಯ ಸರ್ಟಿಫಿಕೇಟ್ ಕಳುಹಿಸಿ ಹಣ ಪಡೆದು ವಂಚನೆ  ; ಆರೋಪಿಯ ಬಂಧನ

- Advertisement -
- Advertisement -

ಮಂಗಳೂರು; ವಿದೇಶದಲ್ಲಿ ಕೆಲಸ ಇದೆ ಎಂದು ನಕಲಿ ಕಂಪನಿಯ ಸರ್ಟಿಫಿಕೇಟ್ ಕಳುಹಿಸಿ ಹಣ ಪಡೆದು ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಯನ್ನು ಬಂಧಿಸಲಾಗಿದೆ. ಮಹಾರಾಷ್ಟ್ರದ ಮುಂಬೈ ನಿವಾಸಿ ಅತುಲ್ ತ್ರಿಪಾಠಿ(29) ಬಂಧಿತ ಆರೋಪಿ.ಈತನನ್ನು ಮುಂಬೈನಲ್ಲಿ ಬಂಧಿಸಲಾಗಿದೆ.

ಈತನನ್ನು ಮುಂಬೈನಲ್ಲಿ ದಸ್ತಗಿರಿ ಮಾಡಿ ದಿನಾಂಕ 21-01-2025 ರಂದು  ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು  ನ್ಯಾಯಾಲಯವು ಆರೋಪಿಗೆ 15 ದಿನಗಳ ನ್ಯಾಯಾಂಗ ಬಂಧನವನ್ನು ವಿಧಿಸಿದೆ.

ಆರೋಪಿಯ ಆರೋಪಿ ಪತ್ತೆ ಬಗ್ಗೆ ಪೊಲೀಸ್ ಅಧೀಕ್ಷಕರು, ದ. ಕ ಜಿಲ್ಲೆ ಮಂಗಳೂರು,  ಹೆಚ್ಚುವರಿ  ಪೊಲೀಸ್ ಅಧೀಕ್ಷಕರು, ದ. ಕ. ಜಿಲ್ಲೆ, ಮಂಗಳೂರು ಇವರುಗಳ ನಿರ್ದೇಶನದಂತೆ, ಸಿಇಎನ್‌ ಅಪರಾಧ ಪೊಲೀಸ್‌ ಠಾಣೆ ಮಂಜುನಾಥ ಆರ್‌.ಜಿ ಪೊಲೀಸು ಉಪಾಧೀಕ್ಷಕರು, ಇವರ ನೇತೃತ್ವದಲ್ಲಿ  ಪಿಎಸ್ಐ  ಮಜುನಾಥ.ಟಿ., ಹೆಚ್.ಸಿ. ಗಳಾದ   ಪುನೀತ್‌ ಕುಮಾರ್,  ಅಜಿತ್‌ ಬಂಗೇರ   ಮತ್ತು ಪಿ ಸಿ  ದರ್ಶನ್‌ ಬಿ.ಎನ್  ಇವರುಗಳು  ತಂಡ ಕಾರ್ಯಾಚರಣೆ ನಡೆಸಿದೆ.

- Advertisement -

Latest News

error: Content is protected !!