Wednesday, June 3, 2026
Homeಕರಾವಳಿಮಂಗಳೂರುಹಿಂದೂ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ ; 21ನೇ ಆರೋಪಿಯನ್ನು ಬಂಧಿಸಿದ ಎನ್ಐಎ

ಹಿಂದೂ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ ; 21ನೇ ಆರೋಪಿಯನ್ನು ಬಂಧಿಸಿದ ಎನ್ಐಎ

- Advertisement -
- Advertisement -

ಮಂಗಳೂರು: ಹಿಂದೂ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ 21ನೇ ಆರೋಪಿಯನ್ನು ಎನ್ಐಎ ಬಂಧಿಸಿದಿದೆ. ಅತೀಕ್ ಅಹಮದ್ ಬಂಧಿತ ಆರೋಪಿ.

ಪಿಎಫ್ಐ ನಾಯಕತ್ವದ ಮಾರ್ಗದರ್ಶನದಲ್ಲಿ ಅತೀಕ್, ಪ್ರಕರಣದ ಮುಖ್ಯ ಆರೋಪಿ ಮುಸ್ತಫಾ ಪೈಚಾರ್ ಗೆ  ಆಶ್ರಯ ನೀಡಿ ಸಹಾಯ ಮಾಡಿದ್ದ ಎನ್ನಲಾಗಿದೆ.  ಮುಸ್ತಫಾ ಈ ಹತ್ಯೆಯ ಪ್ಲ್ಯಾನ್ ರೂಪಿಸಿದ್ದ.  ಜನರಲ್ಲಿ ಭಯ ಮತ್ತು ಕೋಮು ಗಲಭೆಗಳನ್ನು ಉಂಟು ಮಾಡಲು  ಪಿಎಫ್ಐ ಈ ಕೊಲೆ ಮಾಡಿತ್ತು ಎಂದು ಆರೋಪಿಸಲಾಗಿದೆ.

ಕೊಲೆ ಬಳಿಕ ಮುಸ್ತಫಾ ಪರಾರಿಯಾಗಿದ್ದ. ಈ ವೇಳೆ ಮುಸ್ತಫಾ ಪರಾರಿಯಾಗಲು ಅತೀಕ್ ಸಹಾಯ ಮಾಡಿದ್ದ ಎನ್ನಲಾಗಿದೆ. ಮುಸ್ತಫಾನನ್ನು ಚೆನ್ನೈಗೆ ಕರೆದೊಯ್ಯುವುದನ್ನು ಒಳಗೊಂಡಂತೆ, ಮೇ 2024 ರಲ್ಲಿ ಮುಸ್ತಫಾ ಬಂಧನವಾಗುವವರೆಗೆ ಆತ ತಪ್ಪಿಸಿಕೊಳ್ಳಲು ಅತೀಕ್ ಎಲ್ಲಾ ರೀತಿಯಲ್ಲೂ ಸಹಕರಿಸಿದ ಎಂದು ಎನ್ ಐಎ ತಿಳಿಸಿದೆ. ಉಳಿದ ಆರು ಆರೋಪಿಗಳನ್ನು ಪತ್ತೆಹಚ್ಚಲು ಸಂಸ್ಥೆ ತನ್ನ ತನಿಖೆಯನ್ನು ಮುಂದುವರಿಸುತ್ತಿದೆ ಎಂದು ಎನ್ ಐ ಎ ಪ್ರಕಟನೆ ತಿಳಿಸಿದೆ.

- Advertisement -

Latest News

error: Content is protected !!