Wednesday, June 3, 2026
Homeಕರಾವಳಿಪುತ್ತೂರು; ಬೈಕ್  ನಿಂದ ಬಿದ್ದು ಗಾಯಗೊಂಡ ಅರ್ಚಕರನ್ನು ಮಸೀದಿಯಲ್ಲಿ ಉಪಚರಿಸಿದ ಮುಸ್ಲಿಂ ಬಾಂಧವರು

ಪುತ್ತೂರು; ಬೈಕ್  ನಿಂದ ಬಿದ್ದು ಗಾಯಗೊಂಡ ಅರ್ಚಕರನ್ನು ಮಸೀದಿಯಲ್ಲಿ ಉಪಚರಿಸಿದ ಮುಸ್ಲಿಂ ಬಾಂಧವರು

- Advertisement -
- Advertisement -

ಪುತ್ತೂರು; ಬೈಕ್  ನಿಂದ ಬಿದ್ದು ಗಾಯಗೊಂಡ ಅರ್ಚಕರನ್ನು ಮಸೀದಿಯಲ್ಲಿ ಮುಸ್ಲಿಂ ಬಾಂಧವರು ಉಪಚರಿಸಿದ ಘಟನೆ ಒಳಮೊಗ್ರು ಗ್ರಾಮದ ಕುಂಬ್ರದಲ್ಲಿ ನಡೆದಿದೆ.

ಈಶ್ವರಮಂಗಲ ಸಮೀಪದ ಮುಂಡ್ಯ ಎಂಬಲ್ಲಿರುವ ಶಾಸ್ತಾರ ದೇವಸ್ಥಾನದಲ್ಲಿ ಅರ್ಚಕರಾಗಿರುವ ರಘುರಾಮ ಭಟ್ ಬುಧವಾರ ಬೈಕ್‌ನಲ್ಲಿ ಬರುವಾಗ, ಕುಂಬ್ರ ಬದ್ರಿಯಾ ಮಸೀದಿಯ ಎದುರು ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿದ್ದು ಗಾಯಗೊಂಡಿದ್ದರು. ಕಾಲಿಗೆ ಗಾಯವಾಗಿ, ರಕ್ತಸ್ರಾವ ಆಗುತ್ತಿದ್ದ ಅವರನ್ನು ಮಸೀದಿಯಲ್ಲಿದ್ದವರು ಉಪಚರಿಸಿ ಪ್ರಥಮ ಚಿಕಿತ್ಸೆ ನೀಡಿದರು. ಬಳಿಕ ರಿಕ್ಷಾ ಚಾಲಕ ಬಶೀರ್ ಕಡ್ತಿಮಾರ್ ಗಾಯಾಳುವನ್ನು ಸ್ಥಳೀಯ ಕ್ಲಿನಿಕ್‌ಗೆ ಕರೆದೊಯ್ದು ಚಿಕಿತ್ಸೆ ಕೊಡಲು ನೆರವಾದರು.

ಚಿಕಿತ್ಸೆ ಪಡೆದ ಬಳಿಕ ಮಸೀದಿಗೆ ಮರಳಿದ ಅರ್ಚಕರು ಸುಮಾರು 2 ಗಂಟೆ ಮಸೀದಿಯಲ್ಲೇ ವಿಶ್ರಾಂತಿ ಪಡೆದರು. ನಂತರ ಈಶ್ವರಮಂಗಲದ ಸಂದೀಪ್ ಕಾರಂತ ಎಂಬವರು ಬಂದು ರಘುರಾಮ ಭಟ್ ಅವರನ್ನು ಕಾರಿನಲ್ಲಿ ಮನೆಗೆ ಕರೆದುಕೊಂಡು ಹೋದರು ಎನ್ನಲಾಗಿದೆ.

- Advertisement -

Latest News

error: Content is protected !!