Saturday, June 6, 2026
Homeತಾಜಾ ಸುದ್ದಿಸಂಸದ ತೇಜಸ್ವಿ ಸೂರ್ಯಗೆ ಕೂಡಿ ಬಂದ ಕಂಕಣ ಭಾಗ್ಯ: ಶೀಘ್ರವೇ ಗಾಯಕಿ ಸಿವಶ್ರೀ ಸ್ಕಂದ ಪ್ರಸಾದ್...

ಸಂಸದ ತೇಜಸ್ವಿ ಸೂರ್ಯಗೆ ಕೂಡಿ ಬಂದ ಕಂಕಣ ಭಾಗ್ಯ: ಶೀಘ್ರವೇ ಗಾಯಕಿ ಸಿವಶ್ರೀ ಸ್ಕಂದ ಪ್ರಸಾದ್ ವಿವಾಹ

- Advertisement -
- Advertisement -

ಬೆಂಗಳೂರು  ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರಿಗೆ ಕಂಕಣ ಭಾಗ್ಯ ಕೂಡಿ ಬಂದಿದೆ. ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಚೆನ್ನೈ ಮೂಲದ ಸಿವಶ್ರೀ ಸ್ಕಂದ ಪ್ರಸಾದ್ ಅವರ ಜೊತೆ ಸಪ್ತಪದಿ ತುಳಿಯಲಿದ್ದಾರೆ. ಸಿವಶ್ರೀ ಸ್ಕಂದ ಪ್ರಸಾದ್ ಅವರು ಗಾಯಕಿ ಆಗಿದ್ದು ಉತ್ತಮವಾಗಿ ಹಾಡುಗಳನ್ನು ಹಾಡುತ್ತಾರೆ. ಇದರ ಜೊತೆಗೆ ಹರಿಕಥೆ, ಭಜನೆ, ಸೈಕ್ಲಿಂಗ್, ವಾಕ್​ಥಾನ್ ಮೂಲಕ ಗಮನ ಸೆಳೆಯುತ್ತಾರೆ. ಕಳೆದ ವರ್ಷ ರಾಮಾಯಣ ಹಾಡು ಹಾಡಿದ್ದಕ್ಕೆ ಪ್ರಧಾನಿ ಮೋದಿ ಅವರು ಉತ್ತಮವಾಗಿ ಹಾಡಿದರೆಂದು ಟ್ವೀಟರ್​ನಲ್ಲಿ ಪ್ರಶಂಸೆ ವ್ಯಕ್ತಪಡಿಸಿದ್ದರು.

ಇನ್ನು ಸಿವಶ್ರೀ Sivasri_Skandaprasad ಎಂಬ ಯೂಟ್ಯೂಬ್ ವಾಹಿನಿ ಹೊಂದಿದ್ದಾರೆ. ಮಾರ್ಚ್ 14 ರಂದು ವಿವಾಹ ಸಮಾರಂಭ ನಡೆಯಲಿದೆ ಎನ್ನಲಾಗಿದೆ. ಇನ್ನು ಈ ಬಗ್ಗ ತೇಜಸ್ವಿ ಸೂರ್ಯ ಅವರು ಅಧಿಕೃತವಾಗಿ ಎಲ್ಲೂ ಏನೂ ಹೇಳಿಲ್ಲ.

- Advertisement -

Latest News

error: Content is protected !!