Friday, June 26, 2026
Homeಕರಾವಳಿಮಂಗಳೂರುಮಂಗಳೂರು: ಬೈಕ್ ಡಿಕ್ಕಿ ಹೊಡೆದು ಟೆಂಪೋ ಚಾಲಕ ಸಾವು

ಮಂಗಳೂರು: ಬೈಕ್ ಡಿಕ್ಕಿ ಹೊಡೆದು ಟೆಂಪೋ ಚಾಲಕ ಸಾವು

- Advertisement -
- Advertisement -

ಮಂಗಳೂರು: ಬೈಕ್ ಡಿಕ್ಕಿ ಹೊಡೆದು ಟೆಂಪೋ ಚಾಲಕ ಸಾವನ್ನಪ್ಪಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ಅಡ್ಯಾರ್‌ಕಟ್ಟೆ ನಿವಾಸಿ ಅಬೂಬಕರ್‌ ಸಿದ್ದೀಕ್‌ (36) ಮೃತ ಚಾಲಕ.

ಸಿದ್ದಿಕ್ ಅವರು ಬೆಳಗ್ಗೆ ಮನೆಯಿಂದ ಕಲ್ಲಾಪು ಮಾರ್ಕೆಟ್‌ಗೆ ಟೆಂಪೋದಲ್ಲಿ ಹೊರಟಿದ್ದರು. ಅಡ್ಯಾರ್‌ ಕಣ್ಣೂರು ಬಳಿ ತಲುಪಿದಾಗ ಟೆಂಪೋದಲ್ಲಿದ್ದ ಟ್ರೇ ಕೆಳಗೆ ಬಿತ್ತು. ಟೆಂಪೋ ನಿಲ್ಲಿಸಿ ಅದನ್ನು ತೆಗೆಯಲು ಮುಂದಾದಾಗ ಬೈಕ್  ಢಿಕ್ಕಿ ಹೊಡೆದಿದೆ. ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಸೋಮವಾರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಅವರು ತೊಕ್ಕೊಟ್ಟು ಸಮೀಪದ ಕಲ್ಲಾಪು ಮಾರ್ಕೆಟ್‌ನಲ್ಲಿ ಕೆಲಸ ಮಾಡುತ್ತಿದ್ದರು.ಪೊಲೀಸರು ಅಪಘಾತ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!