Saturday, June 6, 2026
Homeಕರಾವಳಿಮಂಗಳೂರುಸುಬ್ರಮಣ್ಯ: ಕೆಲಸಕ್ಕೆಂದು ಹೋದ ವ್ಯಕ್ತಿ ಶವವಾಗಿ ಪತ್ತೆ

ಸುಬ್ರಮಣ್ಯ: ಕೆಲಸಕ್ಕೆಂದು ಹೋದ ವ್ಯಕ್ತಿ ಶವವಾಗಿ ಪತ್ತೆ

- Advertisement -
- Advertisement -

ಸುಬ್ರಮಣ್ಯ: ಕೆಲಸಕ್ಕೆಂದು ಹೋದ ವ್ಯಕ್ತಿ ಶವವಾಗಿ ಪತ್ತೆಯಾಗಿರುವ ಘಟನೆ ಕುಕ್ಕೆ ಸುಬ್ರಹ್ಮಣ್ಯದ ಸವಾರಿ ಮಂಟಪದ ಬಳಿ ನಡೆದಿದೆ. ಕಡಬ ತಾಲೂಕು ಬಿಳಿನೆಲೆ ಗ್ರಾಮದ ಚೇರು ನಿವಾಸಿ  ವಿಶ್ವನಾಥ ಗೌಡ( 45) ಮೃತ ವ್ಯಕ್ತಿ.

ವಿಶ್ವನಾಥ ಗೌಡ ಅವರನ್ನು ಡಿ. 26ರಂದು   ಸುಬ್ರಹ್ಮಣ್ಯದ ಕುಶಾಲಪ್ಪ ಗೌಡರವರು ಕೂಲಿ ಕೆಲಸಕ್ಕೆಂದು ಕರೆದುಕೊಂಡು ಹೋಗಿದ್ದರು ಎನ್ನಲಾಗಿದೆ. ಅಡುಗೆ ಕೆಲಸಕ್ಕೆಂದು ಹೋಗಿದ್ದು  ಸಂಜೆಯಾದರೂ ಮನೆಗೆ ಬಾರದಿರುವುದನ್ನು ಗಮನಿಸಿ ಅಲ್ಲಿಯೇ ಉಳಿದುಕೊಂಡಿರಬಹುದೆಂದು ಸುಮ್ಮನಾಗಿದ್ದರು. ಡಿ.27 ರಂದು  ಮುಂಜಾನೆ  ಮೃತ ಪಟ್ಟು ಸುಬ್ರಹ್ಮಣ್ಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿರುವ ಬಗ್ಗೆ ಮನೆಯವರಿಗೆ ವಾಟ್ಸಾಪ್ ಮೂಲಕ ತಿಳಿದು ಬಂದಿತ್ತು. ವಿಚಾರಿಸಿದಾಗ   ಸುಬ್ರಹ್ಮಣ್ಯ ಗ್ರಾಮದ ಸವಾರಿ ಮಂಟಪದ ಬಳಿ ಅಸ್ವಸ್ಥಗೊಂಡು ಬಿದ್ದು ಮೃತಪಟ್ಟಿರುವುದಾಗಿ ಗೊತ್ತಾಗಿದೆ.

ಮೃತರ ಮಗ ವಿನ್ಯಾಸ ಎಂಬವರು ನೀಡಿದ ದೂರಿನಂತೆ ಸುಬ್ರಹ್ಮಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!