Wednesday, June 24, 2026
Homeಅಪರಾಧನಟ ದರ್ಶನ್  ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ಅಸ್ತು ಎಂದ ರಾಜ್ಯ ಸರ್ಕಾರ;  ಬೇಲ್‌ ಮೇಲಿರುವ...

ನಟ ದರ್ಶನ್  ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ಅಸ್ತು ಎಂದ ರಾಜ್ಯ ಸರ್ಕಾರ;  ಬೇಲ್‌ ಮೇಲಿರುವ ದರ್ಶನ್‌ ಗ್ಯಾಂಗ್‌ಗೆ  ಶಾಕ್

- Advertisement -
- Advertisement -

ಬೆಂಗಳೂರು:  ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ವಾಸ ಅನುಭವಿಸಿ ಕೆಲ ದಿನಗಳ ಹಿಂದಷ್ಟೆ ಜಾಮೀನು ಪಡೆದ ನಟ ದರ್ಶನ್  ಹಾಗೂ ಕೊಲೆ ಪ್ರಕರಣದ ಆರೋಪಿಗಳ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ಸರ್ಕಾರ ಅನುಮತಿ ನೀಡಿದೆ.

ದರ್ಶನ್ ಜಾಮೀನು ರದ್ದಿನ ಕುರಿತು ಮೇಲ್ಮನವಿ ಸಲ್ಲಿಕೆಗೆ ಗೃಹ ಇಲಾಖೆ ಅಧಿಕಾರಿಗಳಿಂದ ಪೊಲೀಸ್‌ ಇಲಾಖೆಗೆ ಆದೇಶ ಸಿಕ್ಕಿದೆ. ಪವಿತ್ರಗೌಡ, ದರ್ಶನ್ ಸೇರಿದಂತೆ ಎಲ್ಲಾ 7 ಜನ ಆರೋಪಿಗಳ ವಿರುದ್ಧ ಸುಪ್ರೀಂ ಮೆಟ್ಟಿಲೇರಲು ಬೆಂಗಳೂರು ಪೊಲೀಸರು ತಯಾರಿ ನಡೆಸುತ್ತಿದ್ದಾರೆ.

ಅನಿಲ್ ಸಿ ನಿಶಾನಿ ಹಾಗೂ ಹಿರಿಯ ವಕೀಲ ಸಿದ್ದಾರ್ಥ್ ಲುಥಾರ ಅವರನ್ನು ಬೆಂಗಳೂರು ಪೊಲೀಸರ  ಪರವಾಗಿ ಸುಪ್ರೀಂ ಕೋರ್ಟ್‌ನಲ್ಲಿ ವಾದಿಸಲು ನೇಮಕ ಮಾಡಲಾಗಿದೆ. ಇನ್ನು ಎರಡ್ಮೂರು ದಿನಗಳಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ಸ್ಪೆಷಲ್‌ ಲೀವ್‌ ಪಿಟಿಷನ್‌  ಸಲ್ಲಿಕೆಯಾಗುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ.

- Advertisement -

Latest News

error: Content is protected !!