Wednesday, June 24, 2026
Homeಕೊಡಗುಕೊಡಗು ಸಂಪಾಜೆ ಪಯಸ್ವಿನಿ ಕೃಷಿ ಪತ್ತಿನ ಸಂಘದ ಚುನಾವಣೆಯಲ್ಲಿ ಸಹಕಾರ ಭಾರತಿ ಕ್ಲೀನ್ ಸ್ವೀಪ್

ಕೊಡಗು ಸಂಪಾಜೆ ಪಯಸ್ವಿನಿ ಕೃಷಿ ಪತ್ತಿನ ಸಂಘದ ಚುನಾವಣೆಯಲ್ಲಿ ಸಹಕಾರ ಭಾರತಿ ಕ್ಲೀನ್ ಸ್ವೀಪ್

- Advertisement -
- Advertisement -

ಸಂಪಾಜೆ: ಪಯಸ್ವಿನಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಸಂಪಾಜೆ‌ ಕೊಡಗು ಇದರ ಆಡಳಿತ ಮಂಡಳಿ ಚುನಾವಣೆಯಲ್ಲಿ ಸಹಕಾರ ಭಾರತಿ ಕ್ಲೀನ್ ಸ್ವೀಪ್ ಮಾಡಿದೆ.

ಆಡಳಿತ ಮಂಡಳಿಗೆ ಭಾನುವಾರ ನಡೆದ ಚುನಾವಣೆಯಲ್ಲಿ ಎಲ್ಲಾ ಹದಿಮೂರು ಸ್ಥಾನಗಳಲ್ಲೂ ಬಿಜೆಪಿ ಬೆಂಬಲಿತ ಸಹಕಾರ ಭಾರತಿಯ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.

ಸಾಮಾನ್ಯ ಕ್ಷೇತ್ರದಿಂದ ಆರು, ಸಾಲಗಾರರಲ್ಲದ ಕ್ಷೇತ್ರದಿಂದ ಒಂದು, ಮಹಿಳಾ ಕ್ಷೇತ್ರದಿಂದ ಎರಡು, ಹಿಂದುಳಿದ ವರ್ಗ ಎ, ಹಿಂದುಳಿದ ವರ್ಗ ಬಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗ ಕ್ಷೇತ್ರದಲ್ಲಿ ತಲಾ ಓರ್ವ ಸಹಕಾರ ಭಾರತಿ ಅಭ್ಯರ್ಥಿ ವಿಜಯ ಸಾಧಿಸಿದ್ದಾರೆ.

ಸಾಮಾನ್ಯ ಕ್ಷೇತ್ರದಿಂದ ಅನಂತ್ ಎನ್.ಸಿ., ತೀರ್ಥ ಪ್ರಸಾದ್ ಕೋಲ್ಚಾರ್, ದಯಾನಂದ ಪನೇಡ್ಕ, ಯಶವಂತ ದೇವರಗುಂಡ, ರಾಮಮೂರ್ತಿ ಉಂಬಳೆ ಮತ್ತು ಹೊನ್ನಪ್ಪ ಕಾಸ್ಪಾಡಿ ಗೆಲುವು ಸಾಧಿಸಿದ್ದಾರೆ.

ಸಾಲಗಾರರಲ್ಲದ ಕ್ಷೇತ್ರದಿಂದ ದಿನೇಶ್ ಸಣ್ಣಮನೆ, ಮಹಿಳಾ ಕ್ಷೇತ್ರದಿಂದ ವಾಣಿ ಜಗದೀಶ್ ಮತ್ತು ಪ್ರಿಯಾಂಕಾ ಹೊಸೂರು ಗೆದ್ದಿದ್ದಾರೆ. ಹಿಂದುಳಿದ ವರ್ಗ ಬಿ ಕ್ಷೇತ್ರದಿಂದ ಪುಂಡರೀಕ ಅರಂಬೂರು, ಹಿಂದುಳಿದ ವರ್ಗ ಬಿ ಕ್ಷೇತ್ರದಿಂದ ಕಿಶನ್ ಪೊನ್ನಾಟಿಯಂಡ, ಪರಿಶಿಷ್ಟ ಜಾತಿ ಕ್ಷೇತ್ರದಿಂದ ಪಕೀರ ಮತ್ತು ಪರಿಶಿಷ್ಟ ವರ್ಗ ಕ್ಷೇತ್ರದಿಂದ ವಸಂತ ನಾಯ್ಕ ಜಯ ಗಳಿಸಿದ್ದಾರೆ.

- Advertisement -

Latest News

error: Content is protected !!