Sunday, June 7, 2026
Homeಕರಾವಳಿಉಡುಪಿರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಬೃಹತ್ ಹೊಂಡಕ್ಕೆ ಮಗುಚಿ ಬಿದ್ದ ಕಾರು; ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾದ...

ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಬೃಹತ್ ಹೊಂಡಕ್ಕೆ ಮಗುಚಿ ಬಿದ್ದ ಕಾರು; ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾದ ಪ್ರಯಾಣಿಕರು

- Advertisement -
- Advertisement -

ಉಡುಪಿ: ಇಲ್ಲಿನ ಅಂಬಲಪಾಡಿ ಜಂಕ್ಷನ್ ನಲ್ಲಿ ರಾಷ್ಟ್ರೀಯ ಹೆದ್ದಾರಿ ಮೇಲ್ಸೇತುವೆ ಕಾಮಗಾರಿಗೆ ಅಗೆದಿರುವ ಬೃಹತ್ ಹೊಂಡಕ್ಕೆ ಕಾರೊಂದು ಮಗುಚಿ ಬಿದ್ದ ಘಟನೆ ಡಿ.27 ಶುಕ್ರವಾರದಂದು ಮುಂಜಾನೆ 3 ಗಂಟೆ ವೇಳೆಗೆ ನಡೆದಿದೆ. 

ಕಾರು ಚಾಲಕನ ನಿಯಂತ್ರಣ ತಪ್ಪಿ ಹೊಂಡಕ್ಕೆ ಬಿದ್ದಿದ್ದು, ಅದೃಷ್ಟವಶಾತ್ ಕಾರಿನಲ್ಲಿದ್ದ ಪ್ರಯಾಣಿಕರು ಸಣ್ಣಪುಟ್ಟ ಗಾಯದೊಂದಿಗೆ ಪಾರಾಗಿದ್ದಾರೆ ಎನ್ನಲಾಗಿದೆ.

ಐದು ಮಂದಿ ಪ್ರಯಾಣಿಕರು ಕೇರಳ ನೋಂದಣಿ ಸಂಖ್ಯೆಯ ಕಾರಿನಲ್ಲಿ ಕೊಲ್ಲೂರಿಗೆ ಪ್ರಯಾಣಿಸುತ್ತಿದ್ದರು. ರಾಷ್ಟ್ರೀಯ ಹೆದ್ದಾರಿ 66ರ ಅಂಬಲಪಾಡಿ ಜಂಕ್ಷನ್ ನಲ್ಲಿ ಮೇಲ್ಸೇತುವೆಯ ಪಿಲ್ಲರ್ ನಿರ್ಮಿಸಲು ಬಹೃತ್ ಹೊಂಡ ಅಗೆಯಲಾಗಿದ್ದು ಈ ಹೊಂಡಕ್ಕೆ ಮಗುಚಿ ಬಿದ್ದಿದೆ. 

ಮುನ್ನಚ್ಚರಿಕಾ ಕ್ರಮವಾಗಿ ಮುಂದಿನ ದಿನಗಳಲ್ಲಿ ಘಟನಾ ಸ್ಥಳದ ಹೊಂಡದ ಸುತ್ತ ಸೂಕ್ತ ಭದ್ರತಾ ವ್ಯವಸ್ಥೆಯನ್ನು ಕಲ್ಪಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಇಂತಹ ಬೃಹತ್ ಹೊಂಡ ಪ್ರಯಾಣಿಕರ ಪಾಲಿಗೆ ಮೃತ್ಯು ಕೂಪವಾಗಬಹುದು ಎಂದು ಸಾರ್ವಜನಿಕರು ತಮ್ಮ ಕಳವಳ ವ್ಯಕ್ತಪಡಿಸಿದ್ದಾರೆ. 

- Advertisement -

Latest News

error: Content is protected !!