Saturday, June 6, 2026
Homeತಾಜಾ ಸುದ್ದಿಶಿವಮೊಗ್ಗ: ಕಾಲೇಜಿನಲ್ಲಿ ಕುಸಿದು ಬಿದ್ದು ಪಿಯುಸಿ ವಿದ್ಯಾರ್ಥಿನಿ ಸಾವು

ಶಿವಮೊಗ್ಗ: ಕಾಲೇಜಿನಲ್ಲಿ ಕುಸಿದು ಬಿದ್ದು ಪಿಯುಸಿ ವಿದ್ಯಾರ್ಥಿನಿ ಸಾವು

- Advertisement -
- Advertisement -

ಶಿವಮೊಗ್ಗ: ಕಾಲೇಜಿನಲ್ಲಿ ಕುಸಿದು ಬಿದ್ದು ಪಿಯುಸಿ ವಿದ್ಯಾರ್ಥಿನಿ ಸಾವನ್ನಪ್ಪಿರುವ ಘಟನೆ ಶಿವಮೊಗ್ಗದ ನಂಜಪ್ಪ ಲೇಔಟ್ ನಲ್ಲಿರುವ ಇಂಪಿರಿಯರ್ ಕಾಲೇಜ್ ನಲ್ಲಿ ನಡೆದಿದೆ. ಮುಬಷಿರ್ ಭಾನು(17) ಮೃತ ದುರ್ದೈವಿ.

ಮುಬಷಿರ್ ಭಾನು ಪ್ರಜ್ಞೆ ತಪ್ಪಿ ಏಕಾಏಕಿ ಹಿಮ್ಮುಖವಾಗಿ ಬಿದ್ದು ಸಾವನ್ನಪ್ಪಿದ್ದಾಳೆ.ಪ್ರೌಢ ಶಾಲೆಯ ಶಿಕ್ಷಕರು ಕಾಲೇಜಿಗೆ ಬಂದ ಹಿನ್ನಲೆ ಮಾತಾಡಿಸಲೆಂದು ಪ್ರಿನ್ಸಿಪಾಲ್ ಕಚೇರಿಗೆ ಬರುತ್ತಿದ್ದಾಗ ಲೋ ಬಿಪಿಯಿಂದ ಮೂರ್ಛೆ ತಪ್ಪಿ ಬಿದ್ದಿದ್ದಾಳೆ. ತಕ್ಷಣವೇ ಆಸ್ಪತ್ರೆಗೆ ಕರೆದುಕೊಂಡು ಹೋದರೂ ಮಾರ್ಗ ಮಧ್ಯದಲ್ಲೇ ಕೊನೆಯುಸಿರೆಳೆದಿದ್ದಾಳೆ. ಯುವತಿ ಬಿದ್ದು ಸಾವನ್ನಪ್ಪಿದ ವಿಡಿಯೋ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

- Advertisement -

Latest News

error: Content is protected !!