ಬಂಟ್ವಾಳ: ಅಂದರ್ ಬಾಹರ್ ಆಡುತ್ತಿದ್ದ 33 ಮಂದಿಯನ್ನು ಪೊಲೀಸರು ಬಂಧಿಸಿರುವ ಘಟನೆ ಬಂಟ್ವಾಳದಲ್ಲಿ ನಡೆದಿದೆ. 7 ಲಕ್ಷಕ್ಕೂ ಅಧಿಕ ನಗದನ್ನು ಪೊಲೀಸರು ವಶ ಪಡೆಸಿಕೊಂಡಿದ್ದಾರೆ.
ಮುಂಜಾನೆ ವೇಳೆ ಬಂಟ್ವಾಳ ತಾಲೂಕು, ಬಡಗಬೆಳ್ಳೂರು ಗ್ರಾಮದ, ಬಡಗಬೆಳ್ಳೂರು ಎಂಬಲ್ಲಿ ನಿಶಾಂತ್ ಎಂಬವರ ಮನೆಯಲ್ಲಿ ಅಕ್ರಮವಾಗಿ ಜುಗಾರಿ ಆಟ ಆಡುತ್ತಿದ್ದಾಗ, ಬಂಟ್ವಾಳ ಡಿವೈಎಸ್‌ಪಿ ವಿಜಯ್ ಪ್ರಸಾದ್ ಅವರ ಮಾರ್ಗದರ್ಶನದಲ್ಲಿ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ಶಿವಕುಮಾರ ಬಿ, ಸಬ್ ಇನ್ಸ್ಪೆಕ್ಟರ್ ಹರೀಶ್ ಹಾಗೂ ಪೊಲೀಸ್ ಸಿಬ್ಬಂದಿ ತಂಡ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದೆ.ಕೆಲವು ಹೆಸರಾಂತ ಉದ್ಯಮಿಗಳು ಹಾಗೂ ಪ್ರತಿಷ್ಠಿತ ವ್ಯಕ್ತಿಗಳು ಸೇರಿದಂತೆ 33 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ ಎನ್ನಲಾಗಿದೆ.
ದಾಳಿ ವೇಳೆ ಜುಗಾರಿ ಆಟ ಆಡಿಸುತ್ತಿದ್ದ ಆರೋಪಿ ನಿಶಾಂತ್ ತಪ್ಪಿಸಿಕೊಂಡಿದ್ದು, ಆಟದಲ್ಲಿ ನಿರತರಾಗಿದ್ದ ಒಟ್ಟು 33 ಜನರನ್ನು ವಶಕ್ಕೆ ಪಡೆದುಕೊಂಡು, ಆರೋಪಿಗಳಿಂದ ಜುಗಾರಿ ಆಟಕ್ಕೆ ಬಳಸಿದ ನಗದು ರೂ. 7,81,420/-, ಇಸ್ಪೀಟ್ ಎಲೆಗಳು, ಸ್ಟೀಲ್ ಟೇಬಲ್, ಪ್ಲಾಸ್ಟಿಕ್ ಚೆಯರ್ ಹಾಗೂ ಇತರೆ ವಸ್ತುಗಳನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ.
ಸ್ವಾಧೀನಪಡಿಸಿದ ಸ್ವತ್ತುಗಳ ಒಟ್ಟು ಮೌಲ್ಯ ರೂ.7,90,220/- ಆಗಿರುತ್ತದೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.