Friday, June 5, 2026
Homeತಾಜಾ ಸುದ್ದಿಕೆರೆಗೆ ಬಿದ್ದ ಮಗನನ್ನು ರಕ್ಷಿಸಲು ಹೋಗಿ ತಾಯಿಯೂ ಸಾವು

ಕೆರೆಗೆ ಬಿದ್ದ ಮಗನನ್ನು ರಕ್ಷಿಸಲು ಹೋಗಿ ತಾಯಿಯೂ ಸಾವು

- Advertisement -
- Advertisement -

ರಾಯಚೂರು: ಮಗ ಕೆರೆಗೆ ಬಿದ್ದದ್ದನ್ನು ಕಂಡು, ಮಗನನ್ನು ರಕ್ಷಿಸಲು ಹೋಗಿ ಕಾಲು ಜಾರಿ ತಾಯಿಯೂ ಕೂಡ ಬಿದ್ದ ಘಟನೆ ರಾಯಚೂರು ಜಿಲ್ಲೆಯ ಮಲಿಯಾಬಾದ್ ಗ್ರಾಮದಲ್ಲಿ ನಡೆದಿದೆ.

ಮೃತರನ್ನು ಮಲಿಯಾಬಾದ್ ಗ್ರಾಮದ ನಿವಾಸಿ ತಾಯಿ ರಾಧಮ್ಮ (32) ಹಾಗೂ ಮಗ ಕೆ.ಸಂಜು (5) ಎನ್ನಲಾಗಿದ್ದು, ಇವರಿಬ್ಬರು ಕೂಡ ಡಿ.09 ಸೋಮವಾರದಂದು ಬೆಳಿಗ್ಗೆ ಬಟ್ಟೆ ತೊಳೆಯಲು ಕೆರೆಗೆ ಹೋಗಿದ್ದರು. ಈ ವೇಳೆಯಲ್ಲಿ ಮಗ ಕಾಲು ಜಾರಿ ಕೆರೆಗೆ ಬಿದ್ದಿದ್ದು, ಅವನನ್ನು ಕಾಪಾಡಲು ತಾಯಿ ಕೆರೆಗೆ ಇಳಿದಿದ್ದು, ಅವರು ಕೂಡ ಜಾರಿ ಬಿದ್ದು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ಇವರಿಬ್ಬರನ್ನು ಕೂಡಲೇ ಸ್ಥಳೀಯರು ರಕ್ಷಿಸಲು ಮುಂದಾಗಿದ್ದರು ಏನು ಪ್ರಯೋಜನವಾಗಿಲ್ಲ. ಮೃತರ ಕುಟುಂಬವು ದುಃಖದ ಮಡುವಿನಲ್ಲಿ ಮುಳುಗಿದೆ.

- Advertisement -

Latest News

error: Content is protected !!