Friday, June 5, 2026
Homeಪ್ರಮುಖ-ಸುದ್ದಿರಾಜ್ಯದಲ್ಲಿಂದು 2496 ಮಂದಿಗೆ ಕೊರೊನಾ ಪಾಸಿಟಿವ್, 87 ಮಂದಿ ಹೆಮ್ಮಾರಿಗೆ ಬಲಿ, ಬೆಂಗಳೂರಿನಲ್ಲಿ 1267 ಕೇಸುಗಳು

ರಾಜ್ಯದಲ್ಲಿಂದು 2496 ಮಂದಿಗೆ ಕೊರೊನಾ ಪಾಸಿಟಿವ್, 87 ಮಂದಿ ಹೆಮ್ಮಾರಿಗೆ ಬಲಿ, ಬೆಂಗಳೂರಿನಲ್ಲಿ 1267 ಕೇಸುಗಳು

- Advertisement -
- Advertisement -

ಬೆಂಗಳೂರು: ಮಹಾಮಾರಿ ಕೊರೊನಾ ರಾಜ್ಯದಲ್ಲಿ ಶರವೇಗದಲ್ಲಿ ವ್ಯಾಪಿಸುತ್ತಿದೆ. ಇಂದು ಕೂಡ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಭಾರೀ ಹೆಚ್ಚಳವಾಗಿದೆ. ಇಂದು ಒಂದೇ ದಿನ ರಾಜ್ಯದಲ್ಲಿ ಬರೋಬ್ಬರಿ 2496 ಪ್ರಕರಣಗಳು ವರದಿಯಾಗಿವೆ. ಹಾಗೇ 87 ಮಂದಿಯನ್ನು ಹೆಮ್ಮಾರಿ ಬಲಿ ಪಡೆದುಕೊಂಡಿದೆ.

ಇನ್ನು ಬೆಂಗಳೂರು ಒಂದರಲ್ಲೇ 1267 ಪ್ರಕರಣಗಳು ಪತ್ತೆಯಾಗಿವೆ. ಸಿಲಿಕಾನ್ ಸಿಟಿಯಲ್ಲಿ 56 ಮಂದಿಯನ್ನು ಇವತ್ತು ಕೊರೊನಾ ಬಲಿ ಪಡೆದುಕೊಂಡಿದೆ. ರಾಜ್ಯದಲ್ಲಿ ಸದ್ಯ 25,839 ಸಕ್ರಿಯ ಪ್ರಕರಣಗಳಿದ್ದು, ಇವತ್ತು ಒಂದೇ ದಿನ ರಾಜ್ಯದಲ್ಲಿ 644 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

- Advertisement -

Latest News

error: Content is protected !!