Friday, June 5, 2026
Homeಕರಾವಳಿಪುತ್ತೂರು: ಗದ್ದೆಗಿಳಿದು ನಾಟಿ ಮಾಡುತ್ತಿರುವ ಮಾಜಿ ಶಾಸಕಿ, ಪ್ರೀತಿಯ 'ಶಕು ಅಕ್ಕ'..

ಪುತ್ತೂರು: ಗದ್ದೆಗಿಳಿದು ನಾಟಿ ಮಾಡುತ್ತಿರುವ ಮಾಜಿ ಶಾಸಕಿ, ಪ್ರೀತಿಯ ‘ಶಕು ಅಕ್ಕ’..

- Advertisement -
- Advertisement -

ಪುತ್ತೂರು: ಪುತ್ತೂರು ಶಾಸಕಿಯಾಗಿ ಹಲವಾರು ಜನಪರ ಕೆಲಸಗಳನ್ನು ಮಾಡಿರುವ ಪ್ರೀತಿಯ ‘ಶಕು ಅಕ್ಕ’ ಖ್ಯಾತಿಯ ಶಕುಂತಲಾ ಶೆಟ್ಟಿ, ಸದ್ಯ ತಮ್ಮ ರಾಜಕೀಯ ಜಂಜಾಟಗಳ ನಡುವೆಯೂ ತಮ್ಮ ಸ್ನೇಹಿತೆಯರೊಂದಿಗೆ ತಾವೇ ಮುಂದೆ ನಿಂತು ಗದ್ದೆಯ ನಾಟಿ ಕಾರ್ಯ ಮಾಡುತ್ತಿದ್ದಾರೆ.

ಹಿಂದಿನ ಕಾಲದಿಂದ ಬಂದಿರುವ ಧಾರ್ಮಿಕ ನಂಬಿಕೆಯ ಪ್ರತೀಕವಾಗಿ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಬಂದಿದ್ದ ಶಕುಂತಲಾ ಶೆಟ್ಟಿಯವರ ಸ್ನೇಹಿತೆಯರು, ಗದ್ದೆಯಲ್ಲಿ ಸಾಮೂಹಿಕವಾಗಿ ನಾಟಿ ಮಾಡುವ ಅಪರೂಪದ ಸನ್ನಿವೇಶ ಸೃಷ್ಟಿಸಿದರು.

ಪುತ್ತೂರು: ಗದ್ದೆಗಿಳಿದು ನಾಟಿ ಮಾಡುತ್ತಿರುವ ಮಾಜಿ ಶಾಸಕಿ, ಪ್ರೀತಿಯ 'ಶಕು ಅಕ್ಕ' ಖ್ಯಾತಿಯ ಶಕುಂತಲಾ ಶೆಟ್ಟಿShakunthala T Shetty Shakuntala Shetty Puttur Fan Club

Posted by Maha Xpress on Tuesday, 14 July 2020

ಯಾಂತ್ರೀಕೃತ ಕೃಷಿ, ತೋಟಗಾರಿಕೆ, ಗದ್ದೆ ಕೃಷಿಯನ್ನು ಕೈಬಿಡುತ್ತಿರುವ ಸನ್ನಿವೇಶ, ಕೃಷಿಗೆ ಜನರೇ ಸಿಗದ ಇಂದಿನ ಪರಿಸ್ಥಿತಿ ನಡುವೆಯೂ ಕೃಷಿಯ ಕಡೆಗೆ ಒಲವು ತೋರಿಸಿರುವ ಶಕುಂತಲಾ ಶೆಟ್ಟಿ, ಈ ಮೂಲಕ ತಾನು ರಾಜಕಾರಣದ ಜೊತೆಗೆ ಕೃಷಿ ಕೆಲಸಕ್ಕೂ ತಾನು ಸೈ ಎಂದು ತೋರಿಸಿಕೊಟ್ಟಿದ್ದಾರೆ.

- Advertisement -

Latest News

error: Content is protected !!