Thursday, June 4, 2026
Homeಪ್ರಮುಖ-ಸುದ್ದಿದ.ಕದಲ್ಲಿಂದು 91 ಮಂದಿಗೆ ಕೊರೊನಾ ದೃಢ, 4 ಮಂದಿ ಹೆಮ್ಮಾರಿಗೆ ಬಲಿ, ಉಡುಪಿಯಲ್ಲಿ 73...

ದ.ಕದಲ್ಲಿಂದು 91 ಮಂದಿಗೆ ಕೊರೊನಾ ದೃಢ, 4 ಮಂದಿ ಹೆಮ್ಮಾರಿಗೆ ಬಲಿ, ಉಡುಪಿಯಲ್ಲಿ 73 ಮಂದಿಗೆ ಸೋಂಕು

- Advertisement -
- Advertisement -

ಮಂಗಳೂರು ; ದಕ್ಷಿಣಕನ್ನಡ ಜಿಲ್ಲೆಯಲ್ಲಿ ಇಂದು 91 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದ್ದು, ಜಿಲ್ಲೆಯ ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ. ಹಾಗೇ 4 ಮಂದಿಯನ್ನು ಇಂದು ಕೋವಿಡ್ ತನಗೆ ಬಲಿಯಾಗಿಸಿಕೊಂಡಿದೆ.

ಇನ್ನು ಇವತ್ತು ಜಿಲ್ಲೆಯಲ್ಲಿ 65 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇದುವರೆಗೂ ಜಿಲ್ಲೆಯಲ್ಲಿ ಒಟ್ಟು 2,444 ಕೊರೊನಾ ಪ್ರಕರಣಗಳು ಕಂಡು ಬಂದಿದ್ದು, ಅದರಲ್ಲಿ 886 ಮಂದಿ ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂಂದ ಡಿಸ್ಟಾರ್ಜ್ ಆಗಿದ್ದಾರೆ. ಸದ್ಯ ಜಿಲ್ಲೆಯಲ್ಲಿ 1,511 ಸಕ್ರೀಯ ಪ್ರಕರಣಗಳಿವೆ.

ಹಾಗೇ ಉಡುಪಿ ಜಿಲ್ಲೆಯಲ್ಲಿ ಇಂದು 73 ಹೊಸ ಕೋವಿಡ್ ಪ್ರಕರಣಗಳು ಕಂಡು ಬಂದಿದ್ದು, ಇದುವೆರಗೂ ಒಟ್ಟು 1,735 ಕೊರೊನಾ ಪ್ರಕರಣಗಳು ವರದಿಯಾಗಿವೆ. ಅದರಲ್ಲಿ 1349 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇನ್ನು ಇವತ್ತು 80 ಜನ ಡಿಸ್ಚಾರ್ಜ್ ಆಗಿದ್ದಾರೆ. ಸದ್ಯ 383 ಸಕ್ರೀಯ ಪ್ರಕರಣಗಳಿವೆ.

- Advertisement -

Latest News

error: Content is protected !!