ಬೆಂಗಳೂರು : ಇಂದು ರಾತ್ರಿ 8 ಗಂಟೆಯಿಂದ ಒಂದು ವಾರಗಳ ಕಾಲ ಬೆಂಗಳೂರಿನಲ್ಲಿ ಲಾಕ್ ಡೌನ್ ಜಾರಿಯಲ್ಲಿ ಇರಲಿವೆ, ಹಾಗಾಗಿ ಸಿನಿಮಾ ಶೂಟಿಂಗ್ , ಧಾರಾವಾಹಿಗಳ ಶೂಟಿಂಗ್ ಒಂದು ವಾರಗಳ ಕಾಲ ಸ್ಥಗಿತಗೊಳ್ಳಲಿವೆ. ಇದರಿಂದಾಗಿ ಮತ್ತೆ ಧಾರಾವಾಹಿಗಳ ಹೊಸ ಎಪಿಸೋಡ್ ಗಳ ಪ್ರಸಾರಕ್ಕೆ ತೊಂದರೆಯಾಗುತ್ತಾ ಅನ್ನೋದು ಧಾರಾವಾಹಿ ಪ್ರಿಯರ ಸದ್ಯದ ಟೆನ್ಶನ್.
ಯಾಕಂದ್ರೆ ಈ ಹಿಂದೆ ಲಾಕ್ ಡೌನ್ ಇದ್ದಾಗ ಧಾರಾವಾಹಿಗಳ ಶೂಟಿಂಗ್ ಸಾಧ್ಯವಾಗದೇ ಹಳೆಯ ಎಪಿಸೋಡ್ ಗಲೇ ಮರುಪ್ರಸಾರವಾಗಿದ್ದವು. ಆದ್ರೆ ಮತ್ತೆ ಇದೀಗ ಒಂದು ವಾರ ಲಾಕ್ ಡೌನ್ ಇರೋದರಿಂದ ಮತ್ತೆ ಸೀರಿಯಲ್ ಪ್ರಸಾರ ಆಗುತ್ತಾ, ಶೂಟಿಂಗ್ ಬೇರೆ ಬಂದ್ ಮಾಡಲಾಗುತ್ತಿದೆ ಹೇಗೆ ಅನ್ನೋ ಯೋಚನೆ ಅನೇಕ ಸೀರಿಯಲ್ ಪ್ರಿಯರದ್ದು.ಆದ್ರೆ ಸದ್ಯಕ್ಕೆ ಆ ಚಿಂತೆ ಇಲ್ಲ ಬಿಡಿ. ಯಾಕಂದ್ರೆ ಲಾಕ್ ಡೌನ್ ಇರೋದು ಕೇವಲ ಒಂದು ವಾರವಷ್ಟೇ. ಬಹುತೇಕ ಧಾರಾವಾಹಿ ತಂಡಗಳು ಈಗಾಗಲೇ ಒಂದು ವಾರಕ್ಕೆ ಆಗುವಷ್ಟು ಸಂಚಿಕೆಗಳನ್ನು ಶೂಟ್ ಮಾಡಿಕೊಂಡಿರುತ್ತವೆ. ಹಾಗಾಗಿ ಹೊಸ ಎಪಿಸೋಡ್ ಗಳ ಪ್ರಸಾರಕ್ಕೆ ತೊಂದರೆಯಾಗುವ ಸಾಧ್ಯತೆ ಕಮ್ಮಿ ಇರೋದರಿಂದ ಧಾರಾವಾಹಿಗಳು ಎಂದಿನಂತೆ ಪ್ರಸಾರವಾಗಲಿವೆ. ಹಾಗಾಗಿ ಸೀರಿಯಲ್ ಪ್ರಿಯರು ಆರಾಮಾವಾಗಿ ಸೀರಿಯಲ್ ಎಂಜಾಯ್ ಮಾಡ್ಬೋದು.