Saturday, June 6, 2026
Homeಕರಾವಳಿಮಂಗಳೂರು: ಪೊಲೀಸರ ಎದುರೇ ಮೂವರು ಯುವಕರ ಮೇಲೆ ಮಾರಾಕಾಸ್ತ್ರಗಳಿಂದ ದಾಳಿ

ಮಂಗಳೂರು: ಪೊಲೀಸರ ಎದುರೇ ಮೂವರು ಯುವಕರ ಮೇಲೆ ಮಾರಾಕಾಸ್ತ್ರಗಳಿಂದ ದಾಳಿ

- Advertisement -
- Advertisement -

ಮಂಗಳೂರು: ಕ್ಷುಲ್ಲಕ ಕಾರಣಕ್ಕೆ ಮಂಗಳೂರಿನ ಬಜಿಲಕೇರಿ ಎಂಬಲ್ಲಿ ಮೂವರು ಯುವಕರ ಮೇಲೆ ತಲವಾರ್ ನಿಂದ ದಾಳಿ ನಡೆಸಲಾಗಿದೆ. ಕಾರ್ ಮತ್ತು ಬೈಕ್ ಗಳಲ್ಲಿ ಬಂದಿದ್ದ ತಂಡವೊಂದು ಮೂವರು ಯುವಕರ ಮೇಲೆ ನಿನ್ನೆ ತಡ ರಾತ್ರಿ ದಾಳಿ ನಡೆಸಿದೆ. ಗಾಯಗೊಂಡ ಯುವಕರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಏಕಾಏಕಿ ಬಂದು ಯುವಕರ ಮೇಲೆ ದಾಳಿ ನಡೆಸಿದ ಈ ದುಷ್ಕರ್ಮಿಗಳು ಸುತ್ತಮುತ್ತಲ ಮನೆಗಳಿಗೂ ಹಾನಿ ಮಾಡಿದ್ದಾರೆ ಎನ್ನಲಾಗಿದೆ. ಆದ್ರೆ ಯಾವ ಕಾರಣಕ್ಕೆ ಈ ದಾಳಿ ನಡೆಸಿದ್ದಾರೆ ಅನ್ನೋ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಇನ್ನು ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ. ಹಾಗೇ ಘಟನೆಗೆ ಸಂಬಂಧಪಟ್ಟಂತೆ ತನಿಖೆ ಮುಂದುವರೆಸಿದ್ದಾರೆ.

- Advertisement -

Latest News

error: Content is protected !!