- Advertisement -
![]()
- Advertisement -
ಕಾಸರಗೋಡು; ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಸಂಚರಿಸುತ್ತಿದ್ದ ಸಾಗುತ್ತಿದ್ದ ಕಾರನ್ನು ಪುಂಡರ ಗುಂಪೊಂದು ಅಡ್ಡಗಟ್ಟಿದ ಘಟನೆ ನಡೆದಿದೆ.
ಭಾನುವಾರ ಸಂಜೆ ಶ್ರೀಗಳು ಬೋವಿಕಾನ – ಇರಿಯಣ್ಣಿ ಮಾರ್ಗ ಮಧ್ಯೆ ತೆರಳುವಾಗ ವಾಹನವನ್ನು ತಡೆದ ಪುಂಡರ ತಂಡವೊಂದು ಗಲಾಟೆ ಮಾಡಿದೆ ಎನ್ನಲಾಗಿದೆ. ಬಳಿಕ ಶ್ರೀಗಳು ಪ್ರಯಾಣ ಮುಂದುವರೆಸಿದ್ದರು. ಇದೇ ದಾರಿಯಲ್ಲಿ ಕಾರ್ಯಕ್ರಮ ಮುಗಿಸಿ ಮರಳಿ ಬರುವಾಗ ಇರಿಯಣ್ಣಿಯಿಂದಲೇ ಹಿಂಬಾಲಿಸಿದ ತಂಡ ಬಾವಿಕೆರೆ ಎಂಬಲ್ಲಿ ದೊಣ್ಣೆಯಿಂದ ಕಾರಿನ ಗಾಜಿಗೆ ಹೊಡೆದು, ಕಾರಿನ ಗಾಜಿಗೆ ಹಾನಿಯಾಗಿದೆ ಎನ್ನಲಾಗಿದೆ.
ಪ್ರಸ್ತುತ ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ ಹಿಂದೂ ಐಕ್ಯವೇದಿ ಘಟನೆಯನ್ನು ಖಂಡಿಸಿ ಪ್ರತಿಭಟನೆಗೆ ಕರೆ ಕೊಟ್ಟಿದೆ. ಅದರಂತೆ ಇಂದು ಸಂಜೆ 5 ಗಂಟೆಗೆ ಹಿಂದೂ ಐಕ್ಯವೇದಿ ನೇತೃತ್ವದಲ್ಲಿ ಬೋವಿಕಾನದಲ್ಲಿ ಬೃಹತ್ ಪ್ರತಿಭಟನಾ ಸಭೆ ನಡೆಯಲಿದೆ.
- Advertisement -


