Monday, August 31, 2026
Homeಕರಾವಳಿಉಡುಪಿಉಡುಪಿ: ನಿಧಾನಗತಿಯ ಸೇತುವೆ ಕಾಮಗಾರಿಯಿಂದ ಕೊಲ್ಲೂರು ಸಮೀಪ ಕೆಸರುಗದ್ದೆಯಂತಾದ ಹೆದ್ದಾರಿ; ಅವ್ಯವಸ್ಥೆಯ ವೀಡಿಯೋ ಹರಿಬಿಟ್ಟು ಸ್ಥಳೀಯರ...

ಉಡುಪಿ: ನಿಧಾನಗತಿಯ ಸೇತುವೆ ಕಾಮಗಾರಿಯಿಂದ ಕೊಲ್ಲೂರು ಸಮೀಪ ಕೆಸರುಗದ್ದೆಯಂತಾದ ಹೆದ್ದಾರಿ; ಅವ್ಯವಸ್ಥೆಯ ವೀಡಿಯೋ ಹರಿಬಿಟ್ಟು ಸ್ಥಳೀಯರ ಆಕ್ರೋಶ

- Advertisement -
- Advertisement -

ಉಡುಪಿ: ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಸಂಪರ್ಕಿಸುವ ರಸ್ತೆ ಸಂಪೂರ್ಣ ಕೆಸರುಮಯವಾಗಿ ಅವ್ಯವಸ್ಥೆ ಉಂಟಾಗಿರುವ ಕಾರಣ ಬೇಸತ್ತ ಸ್ಥಳೀಯರು ರಸ್ತೆಯ ದುರವಸ್ಥೆಯನ್ನು ವೀಡಿಯೋ ಚಿತ್ರೀಕರಿಸಿ ಹರಿಬಿಟ್ಟು ಆಕ್ರೋಶ ಹೊರ ಹಾಕಿದ್ದಾರೆ.

ಉಡುಪಿಯಿಂದ ಕೊಲ್ಲೂರು ಮೂಲಕ ಹೊನ್ನಾಳಿ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ಇದಾಗಿದ್ದು, ಕೊಲ್ಲೂರಿನ ಮಾಸ್ತಿಕಟ್ಟೆಯಲ್ಲಿ ನಡೆಯುತ್ತಿರುವ ಸೇತುವೆ ನಿರ್ಮಾಣದ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿರುವ ಕಾರಣ ಈ ಅವ್ಯವಸ್ಥೆ ಉಂಟಾಗಿದೆ.

ಮಳೆ ಬಂದಿರುವ ಕಾರಣದಿಂದಾಗಿ ವಾಹನಗಳ ಸಂಚಾರದಿಂದ ಹೆದ್ದಾರಿ
ಕೆಸರುಗದ್ದೆಯಂತಾಗಿದ್ದು, ಪ್ರತಿನಿತ್ಯವೂ ಟ್ರಾಫಿಕ್ ಜಾಮ್ ಏರ್ಪಡುತ್ತಿದೆ.

ಕೆಸರು ತುಂಬಿದ ರಸ್ತೆಯಿಂದಾಗಿ ಕೊಲ್ಲೂರು ದೇವಸ್ಥಾನಕ್ಕೆ ಬರುವ ಭಕ್ತರಿಗೂ ತೊಂದರೆ ಉಂಟಾಗಿದ್ದು, ಕೂಡಲೇ ಸೇತುವೆ ಕಾಮಗಾರಿ ಪೂರ್ಣಗೊಳಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

- Advertisement -

Latest News

error: Content is protected !!