Monday, June 8, 2026
Homeಆರಾಧನಾಶ್ರೀಕೃಷ್ಣ ಮಠದಲ್ಲಿ ದೀಪಾವಳಿ ಪ್ರಯುಕ್ತ ಗೂಡು ದೀಪ ಸ್ಪರ್ಧೆ ಉದ್ಘಾಟನೆ

ಶ್ರೀಕೃಷ್ಣ ಮಠದಲ್ಲಿ ದೀಪಾವಳಿ ಪ್ರಯುಕ್ತ ಗೂಡು ದೀಪ ಸ್ಪರ್ಧೆ ಉದ್ಘಾಟನೆ

- Advertisement -
- Advertisement -

ಉಡುಪಿ: ಪರ್ಯಾಯ ಶ್ರೀಕೃಷ್ಣ ಮಠದಿಂದ ದೀಪಾವಳಿ ಹಬ್ಬದ ಪ್ರಯುಕ್ತ ಆಯೋಜಿಸಲ್ಪಟ್ಟ ಗೂಡು ದೀಪ ಸ್ಪರ್ಧೆಯನ್ನು ಪರ್ಯಾಯ ಶ್ರೀ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಇಂದು ಉದ್ಘಾಟಿಸಿದರು.

ಈ ಸ್ಪರ್ಧೆಗಳನ್ನು ಸಾಂಪ್ರದಾಯಿಕ ವಿಭಾಗ, ಆಧುನಿಕ ವಿನ್ಯಾಸದ ಗೂಡುದೀಪ ಸಹಿತ ಸಾಂಸ್ಕೃತಿಕ ಪರಂಪರೆ ಮತ್ತು ಸೃಜನಶೀಲತೆಯನ್ನು ಉತ್ತೇಜಿಸುವ ಗುರಿಯೊಂದಿಗೆ ಆಯೋಜಿಸಲಾಯಿತು ಎಂದು ಪುತ್ತಿಗೆ ಶ್ರೀಗಳು ತಿಳಿಸಿದರು.

ಕಾರ್ಯಕ್ರಮದಲ್ಲಿ ಗೂಡುದೀಪ ನಿರ್ಮಾಣದ ಕಲೆಯನ್ನು ಮಕ್ಕಳಲ್ಲಿ ಸಂರಕ್ಷಿಸಿ ಪ್ರೋತ್ಸಾಹಿಸಲು ಮುಂದಾಗಿರುವ ಯುವಕ ಯುವತಿಯರು, ಮಕ್ಕಳಿಗೆ ಅನುಗ್ರಹಪತ್ರ ವಿತರಿಸಲಾಯಿತು.

- Advertisement -

Latest News

error: Content is protected !!