Sunday, June 7, 2026
Homeಕರಾವಳಿಉಡುಪಿಉಡುಪಿ: ಪತ್ನಿಯಿಂದಲೇ ಪತಿ ಕೊಲೆ ಪ್ರಕರಣ; ಅಂತ್ಯಕ್ರಿಯೆ ಸ್ಥಳದಿಂದ ಮೃತ ಬಾಲಕೃಷ್ಣ ಪೂಜಾರಿ ಮೂಳೆ ಸಂಗ್ರಹಿಸಿ...

ಉಡುಪಿ: ಪತ್ನಿಯಿಂದಲೇ ಪತಿ ಕೊಲೆ ಪ್ರಕರಣ; ಅಂತ್ಯಕ್ರಿಯೆ ಸ್ಥಳದಿಂದ ಮೃತ ಬಾಲಕೃಷ್ಣ ಪೂಜಾರಿ ಮೂಳೆ ಸಂಗ್ರಹಿಸಿ ಪೊಲೀಸರಿಂದ ತನಿಖೆ

- Advertisement -
- Advertisement -

ಉಡುಪಿ: ಪತ್ನಿಯಿಂದಲೇ ಪತಿಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಜೆಕಾರು ಪೊಲೀಸರಿಂದ ತನಿಖೆ ಮುಂದುವರಿದಿದೆ.

ಪ್ರಿಯಕರನ ಸಹಾಯದಿಂದ ಪತ್ನಿಯಿಂದಲೇ
ಕೊಲೆಯಾದ ಬಾಲಕೃಷ್ಣ ಪೂಜಾರಿ ಅವರ ಅಂತ್ಯಕ್ರಿಯೆ ನಡೆಸಿದ ಸ್ಥಳದಿಂದ ಮೂಳೆಗಳನ್ನು ಪೊಲೀಸರು ತನಿಖೆಗಾಗಿ ಸಂಗ್ರಹಿಸಿದ್ದಾರೆ.

ಮೃತ ಬಾಲಕೃಷ್ಣ ಅವರ ಮೂಳೆಯಲ್ಲಿ ವಿಷದ ಅಂಶಗಳಿರುವ ಸಾಧ್ಯತೆ ಹಿನ್ನೆಲೆಯಲ್ಲಿ ತಂದೆ ಸಂಜೀವ ಸಾಲ್ಯಾನ್ ಅವರ ಅನುಮತಿ ಪಡೆದು ಮೂಳೆ ತುಂಡುಗಳನ್ನು ಸಂಗ್ರಹಿಸಲಾಗಿದೆ.

ಇನ್ನು ವಿಷದ ಬಾಟಲಿ ಎಸೆದಿರುವ ಸ್ಥಳದಲ್ಲಿ ಕೂಡಾ ಪೊಲೀಸರಿಂದ ಹುಡುಕಾಟ ನಡೆದಿದ್ದು, ಕುಕ್ಕುಂದೂರು ಗ್ರಾಮದ ಅಯ್ಯಪ್ಪ ನಗರ ಬಳಿ ಮಹಜರು ನಡೆಸಿದ್ದಾರೆ.

ಇದೇ ವೇಳೆ, ಆರೋಪಿ ಮತ್ತು ಪ್ರಿಯಕರ ದಿಲೀಪ್ ಹೆಗ್ಡೆ ಬಾಲಕೃಷ್ಣ ಪೂಜಾರಿ ಪತ್ನಿ ಪ್ರತಿಮಾಗೆ ವಿಷದ ಬಾಟಲಿ ನೀಡಿದ್ದ ಪ್ರತಿಮಾ ನಡೆಸುತ್ತಿದ್ದ ಬ್ಯೂಟಿ ಪಾರ್ಲರ್ ಬಳಿಯೂ ಸ್ಥಳದಲ್ಲೂ ಅಜೆಕಾರು ಮಹಜರು ನಡೆಸಿದ್ದಾರೆ.

ಕಾರ್ಕಳ ತಾಲೂಕಿನ ಅಜೆಕಾರಿ ನಲ್ಲಿ ಪ್ರಿಯಕರ ದಿಲೀಪ್ ಹೆಗ್ಡೆ ಜೊತೆ ಸೇರಿ ಪತ್ನಿ ಪ್ರತಿಮಾ ಪತಿ ಬಾಲಕೃಷ್ಣ ಪೂಜಾರಿ ಅವರನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದರು.

- Advertisement -

Latest News

error: Content is protected !!