Monday, June 8, 2026
Homeಕರಾವಳಿಜರ್ಮನಿಯಲ್ಲಿ ನಡೆದ ರೈಲ್ವೇಸ್ ವಾಲಿಬಾಲ್ ಚಾಂಪಿಯನ್ ಶಿಪ್ ನಲ್ಲಿ ವಿಜೇತ ಭಾರತೀಯ ತಂಡದಲ್ಲಿ ಕಾರ್ಕಳದ ಸುಧೀರ್...

ಜರ್ಮನಿಯಲ್ಲಿ ನಡೆದ ರೈಲ್ವೇಸ್ ವಾಲಿಬಾಲ್ ಚಾಂಪಿಯನ್ ಶಿಪ್ ನಲ್ಲಿ ವಿಜೇತ ಭಾರತೀಯ ತಂಡದಲ್ಲಿ ಕಾರ್ಕಳದ ಸುಧೀರ್ ಶೆಟ್ಟಿ ಮತ್ತು ಬೆಳ್ತಂಗಡಿಯ ಅಶ್ವಲ್ ರೈ

- Advertisement -
- Advertisement -

ನವದೆಹಲಿ: ಜರ್ಮನಿಯ ಬರ್ಲಿನ್‌ನಲ್ಲಿ ನಡೆದ ವಲ್ಡ್ ರೈಲ್ವೇಸ್ ವಾಲಿಬಾಲ್ ಚಾಂಪಿಯನ್ ಶಿಪ್ ನಲ್ಲಿ ಭಾರತೀಯ ರೈಲ್ವೇಸ್ ತಂಡ ಚಾಂಪಿಯನ್ ಆಗಿ ಹೊರ ಹೊಮ್ಮಿದೆ.

ಭಾರತೀಯ ತಂಡದಲ್ಲಿ ಕಾರ್ಕಳ ತಾಲೂಕಿನ ಬೈಲೂರು ಗ್ರಾಮದ ಸುಧೀರ್ ಶೆಟ್ಟಿ ಹಾಗೂ ಬೆಳ್ತಂಗಡಿ ತಾಲೂಕಿನ ಅಶ್ವಲ್ ರೈ ತಂಡದಲ್ಲಿ ಆಟಗಾರರಾಗಿ ಭಾಗಿಯಾಗಿದ್ದರು.ವಾಲಿಬಾಲ್ ಚಾಂಪಿಯನ್ ಶಿಪ್ ನಲ್ಲಿ ವಿಶ್ವದ ಎಂಟು ರೈಲ್ವೇಸ್ ತಂಡಗಳು ಭಾಗವಹಿಸಿದ್ದವು.

ಫೈನಲ್ ಪಂದ್ಯದಲ್ಲಿ ಭಾರತ ತಂಡವು ಅತಿಥೇಯ ಜರ್ಮನಿ ತಂಡವನ್ನು ಮಣಿಸಿ ಚಾಂಪಿಯನ್ ಪಟ್ಟವನ್ನು ಗೆದ್ದುಕೊಂಡಿದೆ.

ವಿಜೇತ ಭಾರತ ತಂಡಕ್ಕೆ ಮತ್ತು ಕರಾವಳಿಯ ಆಟಗಾರರಾದ ಸುಧೀರ್ ಶೆಟ್ಟಿ ಮತ್ತು ಅಶ್ವಲ್ ರೈ ಅವರನ್ನು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅಭಿನಂದಿಸಿದ್ದಾರೆ.

- Advertisement -

Latest News

error: Content is protected !!