- Advertisement -
![]()
- Advertisement -
ಪುತ್ತೂರು; ಮನೆ ಮಂದಿ ಪ್ರವಾಸಕ್ಕೆ ಹೋಗಿದ್ದಾಗ ಕಳ್ಳರು ಮನೆಗೆ ನುಗ್ಗಿ ಕಳ್ಳತನ ಮಾಡಿರುವ ಘಟನೆ ಕಡಬ ತಾಲೂಕಿನ ಸವಣೂರು ಎಂಬಲ್ಲಿ ನಡೆದಿದೆ.
ಸವಣೂರು ನಿವಾಸಿ ಸಲೀಂ ಅವರು ತನ್ನ ಪತ್ನಿ ಹಾಗೂ ಮಕ್ಕಳೊಂದಿಗೆ ಕಳೆದ ಶುಕ್ರವಾರ ಮನೆಗೆ ಬೀಗ ಹಾಕಿ ಪ್ರವಾಸ ಹೋಗಿದ್ದರು.ಪ್ರವಾಸ ಮುಗಿಸಿಕೊಂಡು ಭಾನುವಾರ ಮಧ್ಯರಾತ್ರಿ ವೇಳೆ ಮನೆಗೆ ವಾಪಾಸ್ಸು ಬಂದು ನೋಡಿದಾಗ ಮನೆಯ ಬೀಗ ಮುರಿದು ಕಳ್ಳರು ಮನೆಯೊಳಗೆ ನುಗ್ಗಿರೋದು ಗೊತ್ತಾಗಿದೆ. ಮನೆಯೊಳಗೆ ಪ್ರವೇಶಿದಾಗ ಅಲ್ಲಿದ್ದ ಕಪಾಟು ಬಾಗಿಲು ಒಡೆದು ಅದರಲ್ಲಿದ್ದ ಚಿನ್ನ ಹಾಗೂ ನಗದು ದೋಚಿರುವುದು ಗೊತ್ತಾಗಿದೆ.
ಕಪಾಟಿನಲ್ಲಿದ್ದ 53 ಗ್ರಾಂ ಚಿನ್ನದ ಆಭರಣಗಳು, ಟ್ಯಾಬ್, ಟಿಸೋಟ್ ವಾಚ್ ಹಾಗೂ 30 ಸಾವಿರ ನಗದು ಕಳವಾಗಿದೆ ಎಂದು ಸಲೀಂ ಅವರು ಬೆಳ್ಳಾರೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.ದೂರು ದಾಖಲಿಸಿಕೊಂಡಿರುವ ಬೆಳ್ಳಾರೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
- Advertisement -


