Wednesday, June 3, 2026
Homeಕರಾವಳಿವಿಟ್ಲ: ಹುಲಿ ವೇಷ ಹಾಕುತ್ತೇನೆ ಎಂದು ಹೇಳಿ ಮನೆಯಿಂದ ಹೋದ ವ್ಯಕ್ತಿ ನಾಪತ್ತೆ

ವಿಟ್ಲ: ಹುಲಿ ವೇಷ ಹಾಕುತ್ತೇನೆ ಎಂದು ಹೇಳಿ ಮನೆಯಿಂದ ಹೋದ ವ್ಯಕ್ತಿ ನಾಪತ್ತೆ

- Advertisement -
- Advertisement -

ವಿಟ್ಲ: ಹುಲಿ ವೇಷ ಹಾಕುತ್ತೇನೆ ಎಂದು ಹೇಳಿ ಮನೆಯಿಂದ ಹೋದ ವ್ಯಕ್ತಿ ನಾಪತ್ತೆಯಾಗಿರುವ ಘಟನೆ

ವಿಟ್ಲ ಕಸಬಾ ಗ್ರಾಮದ ಪಳಿಕೆ ಎಂಬಲ್ಲಿ ನಡೆದಿದೆ. ಅಣ್ಣಮೂಲೆ ನಿವಾಸಿ ಸುಂದರ ನಾಯ್ಕ್‌ (55) ನಾಪತ್ತೆಯಾದವರು.ಸುಂದರ ನಾಯ್ಕ್‌ ರವರು ಕೂಲಿ ಕೆಲಸ ಮಾಡಿಕೊಂಡಿದ್ದು, ದಸರಾ ಹಬ್ಬದ ಪ್ರಯುಕ್ತ ವೇಷ ಹಾಕುತ್ತಿದ್ದರು.

ಅದೇ ರೀತಿ ಅ.1 ರಂದು ಬೆಳಿಗ್ಗೆ ಮನೆಯಲ್ಲಿ ಇರುವಾಗ ನಾಳೆ ನನಗೆ ಹುಲಿ ವೇಷ ಹಾಕಲು ಇದೆ.  ವಿಟ್ಲ ಠಾಣೆಗೆ ಹೋಗಿ ಅನುಮತಿ ಪಡೆದುಕೊಂಡು ಬರುತ್ತೇನೆ ಎಂದು ಹೇಳಿ ಹೋಗಿದ್ದರು.

ದಸರಾ ಹಬ್ಬ ಇರುವುದರಿಂದ ಹಬ್ಬದಲ್ಲಿ ವೇಷ ಹಾಕಿ ಹಬ್ಬ ಮುಗಿದ ನಂತರ ಮನೆಗೆ ಬರಬಹುದೆಂದು ಭಾವಿಸಿದ್ದು ಆದರೆ ಈವರೆಗೂ ಗಂಡ ಮನೆಗೆ ಬಾರದೇ ಇರುವುದರಿಂದ ಸಂಬಂಧಿಕರಲ್ಲಿ, ನೆರೆಕರೆಯವರಲ್ಲಿ ವಿಚಾರಿಸಿದರೂ ಎಲ್ಲಿಯೂ ಪತ್ತೆಯಾಗಿಲ್ಲ ಎಂದು ಅವರ ಪತ್ನಿ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

- Advertisement -

Latest News

error: Content is protected !!