Wednesday, June 3, 2026
Homeಅಪರಾಧಮದರಸ ಹಾಸ್ಟೆಲ್‌ ನಲ್ಲಿ ಎಂಟನೇ ತರಗತಿ ವಿದ್ಯಾರ್ಥಿ ನೇಣು ಬಿಗಿದು ಆತ್ಮಹತ್ಯೆ

ಮದರಸ ಹಾಸ್ಟೆಲ್‌ ನಲ್ಲಿ ಎಂಟನೇ ತರಗತಿ ವಿದ್ಯಾರ್ಥಿ ನೇಣು ಬಿಗಿದು ಆತ್ಮಹತ್ಯೆ

- Advertisement -
- Advertisement -

ಬ್ರಹ್ಮಾವರ: ಇಲ್ಲಿನ ಮದರಸ ಹಾಸ್ಟೆಲ್‌ ನಲ್ಲಿ ಹೇರಾಡಿ ಖಾಸಗಿ ಶಾಲೆಯ ಎಂಟನೇ ತರಗತಿಯ ವಿದ್ಯಾರ್ಥಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಮೃತ ವಿದ್ಯಾರ್ಥಿಯು ರಿಹಾನ ಬೇಗಂ ಎಂಬವರ ಪುತ್ರ ಮೊಹಮ್ಮದ್‌ ಜಹೀದ (12) ಎನ್ನಲಾಗಿದೆ

ಬ್ರಹಾವರ ತಾಲೂಕಿನ ರಂಗನಕೆರೆಯ ಮಾಲೀಕ್ ದಿನಾರ್ ಮದರಸ ಹಾಸ್ಟೆಲ್‌ನಲ್ಲಿ ಈತನು ಕಳೆದ 4 ತಿಂಗಳಿಂದ ಉಳಿದುಕೊಂಡು ಹೇರಾಡಿ ಖಾಸಗಿ ಶಾಲೆಯಲ್ಲಿ 08 ನೇ ತರಗತಿ ವಿಧ್ಯಾಭ್ಯಾಸ ಮಾಡುತ್ತಿದ್ದು ರಜೆಯನ್ನು ಮುಗಿಸಿ ಅ. 11ರಂದು ಹಾಸ್ಟೆಲ್‌ ಗೆ ಮರಳಿದ್ದಾನೆ. ಆತ ರಾತ್ರಿ 9 ಗಂಟೆಗೆ ಊಟಕ್ಕೆ ಬಾರದಿದ್ದುದನ್ನು ಗಮನಿಸಿ ಹುಡುಕಿದಾಗ ಹಾಸ್ಟೆಲ್‌ನ ಬಾತ್‌ರೂಮ್‌ನಲ್ಲಿ ಸರಳಿಗೆ ಬೈರಸ್‌ನಿಂದ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿದ್ದುದು ಕಂಡುಬಂದಿದೆ. ಕೂಡಲೇ ಆತನನ್ನು ಚಿಕಿತ್ಸೆಗಾಗಿ ಬ್ರಹ್ಮಾವರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿದ್ದು, ವೈದ್ಯರು ರಾತ್ರಿ 10:40ರ ಸುಮಾರಿಗೆ ಆತನನ್ನು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ.

ಬಾಲಕನ ತಾಯಿ ರಿಹಾನ ಬೇಗಂ ಮೃತನ ಮರಣದಲ್ಲಿ ಸಂಶಯವಿರುವುದಾಗಿ ದೂರು ನೀಡಿದ್ದು, ದೂರಿನಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!