Monday, March 17, 2025
Homeಉತ್ತರ ಕನ್ನಡಭಟ್ಕಳದಲ್ಲಿ ತೆರೆಗಳ ಹೊಡೆತಕ್ಕೆ ಸಿಲುಕಿ ಮುಳುಗುತ್ತಿದ್ದ ಪ್ರವಾಸಿಗನ ರಕ್ಷಣೆ

ಭಟ್ಕಳದಲ್ಲಿ ತೆರೆಗಳ ಹೊಡೆತಕ್ಕೆ ಸಿಲುಕಿ ಮುಳುಗುತ್ತಿದ್ದ ಪ್ರವಾಸಿಗನ ರಕ್ಷಣೆ

spot_img
- Advertisement -
- Advertisement -

ಭಟ್ಕಳ: ಪ್ರವಾಸಿಗನೋರ್ವನು ಮುರುಡೇಶ್ವರ ಸಮುದ್ರಕ್ಕೆ ಈಜಲು ತೆರಳಿದ್ದ ಸಂದರ್ಭದಲ್ಲಿ ತೆರೆಗಳ ಹೊಡೆತಕ್ಕೆ ಸಿಲುಕಿ ಮುಳುಗುತ್ತಿದ್ದು, ಆತನನ್ನು ಕರಾವಳಿ ಕಾವಲು ಪಡೆಯ ಕೆ.ಎನ್.ಡಿ. ಸಿಬ್ಬಂದಿಗಳು ಹಾಗೂ ಲೈಫ್ ಗಾರ್ಡ್ ಸಿಬ್ಬಂದಿ ರಕ್ಷಣೆ ಮಾಡಿದ ಘಟನೆ ಅ. 13 ರವಿವಾರದಂದು ನಡೆದಿದೆ.

ರಕ್ಷಿಸಲ್ಪಟ್ಟ ಪ್ರವಾಸಿಗ ಬೆಂಗಳೂರಿನಿಂದ ಸಂಗಡಿಗರೊಂದಿಗೆ ಮುರ್ಡೇಶ್ವರಕ್ಕೆ ಪ್ರವಾಸ ಬಂದಿದ್ದ ಪುನೀತ್ ಕೆ. (19). ಇವರು ಈಜಲು ಸಮುದ್ರಕ್ಕೆ ಇಳಿದಿದ್ದರು.

ಈಜಲು ಬಾರದ ಪುನೀತ್ ಗೆ ನೀರಿನ ಸೆಳೆತ ತಿಳಿಯದೇ ಮುಂದೆ ಮುಂದೆ ಹೋಗಿದ್ದರಿಂದ ಅಲೆಯ ಹೊಡೆತಕ್ಕೆ ಆಯತಪ್ಪಿ ಅಪಾಯಕ್ಕೆ ಸಿಲುಕಿದ್ದರು. ತಕ್ಷಣ ಇದನ್ನು ಕಂಡ ಸ್ಥಳದಲ್ಲಿದ್ದ ಕೆ.ಎನ್.ಡಿ. ಸಿಬ್ಬಂದಿ ಯೋಗೇಶ ಹರಿಕಾಂತ ಹಾಗೂ ಲಕ್ಷ್ಮಣ ಹರಿಕಾಂತ ಅವರು ಪಾತಿ ದೋಣಿಯನ್ನು ತೆಗೆದುಕೊಂಡು ಹೋಗಿ ಮುಳುಗುತ್ತಿದ್ದ ಪುನೀತ್ ನನ್ನು ರಕ್ಷಣೆ ಮಾಡಿದ್ದಾರೆ.

- Advertisement -
spot_img

Latest News

error: Content is protected !!