Friday, June 5, 2026
Homeಕರಾವಳಿಕಾಸರಗೋಡುಕಾಸರಗೋಡು; 2  ವರ್ಷದ ಬಾಲಕನನ್ನು ಬಲಿ ಪಡೆದ ಸ್ಲೈಡಿಂಗ್ ಗೇಟ್

ಕಾಸರಗೋಡು; 2  ವರ್ಷದ ಬಾಲಕನನ್ನು ಬಲಿ ಪಡೆದ ಸ್ಲೈಡಿಂಗ್ ಗೇಟ್

- Advertisement -
- Advertisement -

ಕಾಸರಗೋಡು; ಸ್ಲೈಡಿಂಗ್ ಗೇಟ್ ಬಿದ್ದು ಎರಡು ವರ್ಷದ ಕಂದಮ್ಮ ಸಾವನ್ನಪ್ಪಿರುವ ಘಟನೆ ಕಾಸರಗೋಡಿನ ಉದ್ಮ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬುಧವಾರ ನಡೆದಿದೆ. ಉದ್ಮಾ ಪಂಚಾಯತ್‌ನ ಪಲ್ಲಂ ತೆಕ್ಕೆಕ್ಕರ ವಾರ್ಡ್‌ನ ನಿವಾಸಿ ರೈಮಾ ಮತ್ತು ಮಾಹಿನ್ ರಫಿ ದಂಪತಿಯ ಪುತ್ರ ಅಬು ತಾಹಿರ್ (2) ಮೃತ ಮಗು.

ರಫಿ ಅವರು ಶುಕ್ರವಾರ ದುಬೈನಲ್ಲಿರುವ ತಮ್ಮ ಕೆಲಸದ ಸ್ಥಳಕ್ಕೆ ಮರಳಬೇಕಿತ್ತು. ಈ ಹಿನ್ನಲೆ ಮಾಂಙಾಡ್ ನ ಸಂಬಂಧಿಕರ ಮನೆಗೆ ಆಗಮಿಸಿದ್ದರು. ಈ ವೇಳೆ ಅವರ ಮನೆಯ ಗೇಟ್ ನಲ್ಲಿ ಆಟವಾಡುತ್ತಿದ್ದ ಬಾಲಕನ ಮೇಲೆ ಐದು ಅಡಿ ಎತ್ತರದ ಕಬ್ಬಿಣದ ಗೇಟ್ ಬಿದ್ದಿದ್ದು, ಅದರಡಿ ಸಿಲುಕಿದ ಬಾಲಕನನ್ನು ಕೂಡಲೇ ಕಾಸರಗೋಡಿನ ಆಸ್ಪತ್ರೆಗೆ ತಲಪಿಸಿದರೂ ಅಷ್ಟರಲ್ಲಿ ಮಗು ಉಸಿರು ನಿಲ್ಲಿಸಿದೆ.

- Advertisement -

Latest News

error: Content is protected !!