Wednesday, June 24, 2026
Homeತಾಜಾ ಸುದ್ದಿಒಂದು ದೇಶ-ಒಂದು ಚುನಾವಣೆ ಕುರಿತ ಕೋವಿಂದ್ ಸಮಿತಿ ವರದಿಗೆ ಕೇಂದ್ರ ಸಚಿವ ಸಂಪುಟ ಸಭೆ ಒಪ್ಪಿಗೆ

ಒಂದು ದೇಶ-ಒಂದು ಚುನಾವಣೆ ಕುರಿತ ಕೋವಿಂದ್ ಸಮಿತಿ ವರದಿಗೆ ಕೇಂದ್ರ ಸಚಿವ ಸಂಪುಟ ಸಭೆ ಒಪ್ಪಿಗೆ

- Advertisement -
- Advertisement -

ನವದೆಹಲಿ: ಒಂದು ದೇಶ ಒಂದು ಚುನಾವಣೆ ಕುರಿತ ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಸಮಿತಿ ವರದಿಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ.

ನವದಹೆಲಿಯಲ್ಲಿ ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ವರದಿಗೆ ಅನುಮೋದನೆ ನೀಡಲಾಗಿದೆ.

ಮುಂದಿನ ಚಳಿಗಾಲದ ಅಧಿವೇಶನದಲ್ಲೇ ಒಂದು ದೇಶ-ಒಂದು ಚುನಾವಣೆ ನಡೆಸುವ ಸಂಬಂಧ ಮಸೂದೆ ಮಂಡನೆಯಾಗುವ ಸಾಧ್ಯತೆ ಇದೆ.

ಒಂದು ದೇಶ-ಒಂದು ಚುನಾವಣೆ ಜಾರಿಗೊಳಿಸುವ ಸಂಬಂಧ ಕೇಂದ್ರ ಸರ್ಕಾರ ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅಧ್ಯಕ್ಷತೆಯಲ್ಲಿ ಎಂಟು ಸದಸ್ಯರನ್ನೊಳಗೊಂಡ ಸಮಿತಿ ರಚನೆ ಮಾಡಿತ್ತು. 2023ರ ಸೆಪ್ಟೆಂಬರ್ 2ರಂದು ಈ ಸಮಿತಿಯನ್ನು ರಚಿಸಲಾಗಿತ್ತು.

ಒಂದು ದೇಶ-ಒಂದು ಚುನಾವಣೆಗೆ ಈಗಾಗಲೇ ವಿಪಕ್ಷಗಳಿಂದ ವಿರೋಧ ವ್ಯಕ್ತವಾಗಿದ್ದು, ಆಡಳಿತಾರೂಢ ಎನ್ ಡಿಎ ಮೈತ್ರಿಕೂಟ ಸಚಿವ ಸಂಪುಟದ ನಿರ್ಣಯವನ್ನು ಸ್ವಾಗತಿಸಿದೆ.

- Advertisement -

Latest News

error: Content is protected !!