Sunday, June 7, 2026
Homeಕರಾವಳಿಅಕ್ರಮ ಮರಳು‌ ದಂಧೆಗೆ ‘ಪಾವೂರು ಉಳಿಯ’ ದ್ವೀಪ ಬಳಕೆ; ದ್ವೀಪದ ನಿವಾಸಿಗಳಿಂದ ಜಿಲ್ಲಾಡಳಿತ ಮೌನ ಖಂಡಿಸಿ...

ಅಕ್ರಮ ಮರಳು‌ ದಂಧೆಗೆ ‘ಪಾವೂರು ಉಳಿಯ’ ದ್ವೀಪ ಬಳಕೆ; ದ್ವೀಪದ ನಿವಾಸಿಗಳಿಂದ ಜಿಲ್ಲಾಡಳಿತ ಮೌನ ಖಂಡಿಸಿ ಪ್ರತಿಭಟನೆ

- Advertisement -
- Advertisement -

ಮಂಗಳೂರು: ‘ಪಾವೂರು ಉಳಿಯ’ ದ್ವೀಪವು ನಗರದ ಹೊರ ವಲಯದಲ್ಲಿದ್ದು, ಈ ದ್ವೀಪವನ್ನು ಅಕ್ರಮ ಮರಳು‌ ದಂಧೆಯ ಮೂಲಕ ದಂಧೆಕೋರರು ನಾಶ ಮಾಡುತ್ತಿದ್ದರೂ, ಜಿಲ್ಲಾಡಳಿತ ನೋಡಿಯು ಮೌನವಹಿಸುತ್ತಿದೆ. ಜಿಲ್ಲಾಡಳಿತದ ಮೌನವನ್ನು ಖಂಡಿಸಿ ದ್ವೀಪದ ನಿವಾಸಿಗಳು ಸೆ.15ರ ರವಿವಾರ ನೇತ್ರಾವತಿ ನದಿ ನೀರಿನಲ್ಲಿ ನಿಂತು ಪ್ರತಿಭಟಿಸಿದರು.

ಪ್ರತಿಭಟನಕಾರರು ನೇತ್ರಾವತಿ ನದಿ ನೀರಿನಲ್ಲಿ ನಿಂತು ಜಿಲ್ಲಾಡಳಿತದ ವಿರುದ್ಧ ಘೋಷಣೆಗಳನ್ನು ಕೂಗಿ,‌ ದ್ವೀಪವನ್ನು ಅಕ್ರಮ ಮರಳುಗಾರಿಕೆಯಿಂದ ರಕ್ಷಿಸುವಂತೆ ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಕೆಥೋಲಿಕ್ ಸಭಾ ಮಂಗಳೂರು ಅಧ್ಯಕ್ಷ ಆಲ್ವಿನ್ ಡಿ’ಸೋಜಾ, ಮಾಜಿ ಅಧ್ಯಕ್ಷ ಸ್ಟ್ಯಾನಿ ಲೋಬೊ, ಧರ್ಮಗುರು ಫಾ| ವಲೇರಿಯನ್ ಡಿ’ಸೋಜಾ, ಐಸಿ ವೈಎಂ ಮಾಜಿ ಅಧ್ಯಕ್ಷ ಮಿಥೇಶ್ ಲೋಬೊ, ಸ್ಥಳೀಯರಾದ ಗಿಲ್ಬರ್ಟ್ ಡಿ’ಸೋಜಾ ಮೊದಲಾದವರು ಸೇರಿದ್ದರು.

- Advertisement -

Latest News

error: Content is protected !!