Wednesday, June 24, 2026
Homeಕರಾವಳಿಉಡುಪಿಸೆ. 15ರಿಂದ ಮತ್ತೆ ಮಲ್ಪೆ ಸೈಂಟ್‌ ಮೇರೀಸ್‌ ದ್ವೀಪಯಾನ

ಸೆ. 15ರಿಂದ ಮತ್ತೆ ಮಲ್ಪೆ ಸೈಂಟ್‌ ಮೇರೀಸ್‌ ದ್ವೀಪಯಾನ

- Advertisement -
- Advertisement -

ಮಲ್ಪೆ: ಮಳೆಗಾಲದಲ್ಲಿ 4 ತಿಂಗಳ ಕಾಲ ಮಲ್ಪೆ ಸೈಂಟ್‌ ಮೇರೀಸ್‌ ದ್ವೀಪಕ್ಕೆ ಹೇರಲಾಗಿದ್ದ ಪ್ರವೇಶ ನಿರ್ಬಂಧ ಅವಧಿ ತೆರವಾಗಿದ್ದು, ಸೆ. 15ರಿಂದ ಮತ್ತೆ ದ್ವೀಪ ಯಾನ ಆರಂಭಗೊಳ್ಳುತ್ತಿದೆ.

ಪ್ರತಿವರ್ಷ ಮೇ 15ರಿಂದ ಸೆ. 14ರ ವರೆಗೆ ದಡದಿಂದ 4-5 ಕಿ.ಮೀ. ದೂರದಲ್ಲಿರುವ ದ್ವೀಪಕ್ಕೆ ಮಳೆಗಾಲದಲ್ಲಿ  ತೆರಳುವುದು ಅಪಾಯಕಾರಿ ಎಂದು ಇಲ್ಲಿನ ಪ್ರವೇಶಕ್ಕೆ ಜಿಲ್ಲಾಡಳಿತ ನಿರ್ಬಂಧ ಹೇರುತ್ತದೆ.

ಇನ್ನು ಮಲ್ಪೆ ಬೀಚ್‌ ಮತ್ತು ಮೀನುಗಾರಿಕೆ ಬಂದರಿನ ಪಶ್ಚಿಮ ಭಾಗದಲ್ಲಿ ದ್ವೀಪಕ್ಕೆ ದೊಡ್ಡ ಪ್ರವಾಸಿ ಬೋಟ್‌ನ ವ್ಯವಸ್ಥೆ ಇದೆ. ಮಲ್ಪೆ ಬೀಚ್‌ನಿಂದ ದ್ವೀಪಕ್ಕೆ ಹೋಗಲು ಪ್ರವಾಸಿ ಸ್ಪೀಡ್‌ ಬೋಟುಗಳೂ ಇವೆ.

ನಾಲ್ಕೈದು ತಿಂಗಳುಗಳ ಕಾಲ ದ್ವೀಪದಲ್ಲಿ ಗಿಡಗಂಟಿಗಳು ಎತ್ತರಕ್ಕೆ ಬೆಳೆದು ನಿಂತಿದ್ದು, ಅದನ್ನು ತೆರವುಗೊಳಿಸುವ ಕೆಲಸ ನಡೆಸಲಾಗುತ್ತಿದೆ. ದ್ವೀಪದ ಸುತ್ತಲೂ ತ್ಯಾಜ್ಯಗಳು ಸಂಗ್ರಹವಾಗಿದ್ದು, 12 ಕಟ್ಟಿಂಗ್‌ ಮೆಶಿನ್‌ ಮೂಲಕ ರವಿವಾರದಿಂದ ಸ್ವಚ್ಛತಾ ಕೆಲಸ ಮಾಡಲಾಗುವುದು ಎಂದು ಮಲ್ಪೆ ಬೀಚ್‌ ಅಭಿವೃದ್ಧಿ ಸಮಿತಿ ಅಧ್ಯಕ್ಷ ಪಾಂಡುರಂಗ ಮಲ್ಪೆ ತಿಳಿಸಿದ್ದಾರೆ.

- Advertisement -

Latest News

error: Content is protected !!