ಮಂಗಳೂರು : ಮಂಗಳೂರಿನಲ್ಲಿ ಇಂದು ಬರೋಬ್ಬರಿ 186 ಕೊರೊನಾ ಪಾಸಿಟಿವ್ ಕೇಸುಗಳು ಪತ್ತೆಯಾಗಿವೆ. ಅನಾರೋಗ್ಯದ ಲಕ್ಷಣಗಳಿದ್ದ 64 ಮಂದಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದ್ದರೆ, ಸೋಂಕಿತರ ಪ್ರಾಥಮಿಕ ಸಂಪರ್ಕದಿಂದ 37 ಮಂದಿಗೆ ಕೋವಿಡ್-19 ತಗುಲಿದೆ.
ಇನ್ನು ಸಂಪರ್ಕ ಪತ್ತೆಯಾಗದ 32 ಮಂದಿಗೆ ಕೋವಿಡ್ ದೃಢಪಟ್ಟಿದ್ದರೆ, ಎಸ್ ಎ ಆರ್ ಐಯ 17 ಮಂದಿ, ಹಾಗೇ ರ್ಯಾಂಡಮ್ ಟೆಸ್ಟ್ ನಿಂದ 12 ಮಂದಿಗೆ, ವಿದೇಶದಿಂದ ಬಂದ 10 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಮತ್ತೊಂದು ಆತಂಕದ ವಿಚಾರ ಅಂದರೆ ಶಸ್ತ್ರಚಿಕಿತ್ಸೆಯ ಮೊದಲು ಮಾಡಿದ ಟೆಸ್ಟ್ ನಿಂದ 7 ಮಂದಿಗೆ ಕೊರೊನಾ ಪಾಸಿಟಿವ್ ಬಂದಿದೆ. ಇನ್ನು ಹೆರಿಗೆಗಿಂತ ಮೊದಲು ಮಾಡಿದ ಟೆಸ್ಟ್ ನಲ್ಲಿ 4 ಮಹಿಳೆಯರಿಗೆ ಕೊರೊನಾ ಸೋಂಕು ಕನ್ಫರ್ಮ್ ಆಗಿದೆ. ಹಾಗೇ, ಹೊರ ಜಿಲ್ಲೆಯಿಂದ ಬಂದ ಇಬ್ಬರು ಕೊರೊನಾಗೆ ತುತ್ತಾಗಿದ್ದಾರೆ.
ದ.ಕ ಜಿಲ್ಲೆಯಲ್ಲಿ ಒಬ್ಬರಿಂದ ಒಬ್ಬರಿಗೆ ಸೋಂಕು ವೇಗವಾಗಿ ಹರಡುತ್ತಿದೆ. ಕಳೆದ ಐದು ದಿನದಿಂದ ಪ್ರತಿದಿನ ಸೋಂಕಿತರ ಸಂಖ್ಯೆ ನೂರು ದಾಟುತ್ತಿದೆ.


