Wednesday, June 24, 2026
Homeಅಪರಾಧಚೇರ್ ಬಳಿಕ ತಮ್ಮ ಸೆಲ್ ನಲ್ಲಿ ಟಿವಿ ಬೇಕೆಂದು ಡಿಮ್ಯಾಂಡ್ ಮಾಡಿದ ದಾಸ

ಚೇರ್ ಬಳಿಕ ತಮ್ಮ ಸೆಲ್ ನಲ್ಲಿ ಟಿವಿ ಬೇಕೆಂದು ಡಿಮ್ಯಾಂಡ್ ಮಾಡಿದ ದಾಸ

- Advertisement -
- Advertisement -

ಬೆಂಗಳೂರು: ನಟ ದರ್ಶನ್ ಬಳ್ಳಾರಿ ಜೈಲಿಗೆಸೇರಿದ ಬಳಿಕ ಅಲ್ಲೂ ಕೂಡ ಜೈಲು ಅಧಿಕಾರಿಗಳ ಬಳಿ ಕೆಲ ಬೇಡಿಕೆಗಳನ್ನಿಟ್ಟಿದ್ದಾರೆ ಎಂದು ವರದಿಯಾಗಿದೆ.

ದರ್ಶನ್‌ ಪರಪ್ಪನ ಅಗ್ರಹಾರದಲ್ಲಿದ್ದ ಸಮಯದಲ್ಲಿ ಬಹುತೇಕ ಎಲ್ಲದಕ್ಕೂ ಹೊಂದಿಕೊಂಡಿದ್ದು, ಬಳ್ಳಾರಿ ಜೈಲಿಗೆ ಶಿಫ್ಟ್‌ ಆದ ಬಳಿಕ ಬೆನ್ನುನೋವು ಕಾಣಿಸಿಕೊಂಡಿದ್ದು, ಈ ಸಂದರ್ಭದಲ್ಲಿ ತಮಗೆ ಸರ್ಜಿಕಲ್‌ ಚೇರ್‌ ಬೇಕೆಂದು ಮನವಿ ಮಾಡಿದ್ದರು.

ಇದೀಗ ಚೇರ್‌ ಸಿಕ್ಕ ಬಳಿಕ ತಮ್ಮ ಸೆಲ್‌ನಲ್ಲಿ ಟಿವಿ ಬೇಕೆಂದು ದರ್ಶನ್‌ ಜೈಲು ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ ಎಂದು ಹೇಳಲಾಗಿದೆ. ಜೈಲು ಅಧಿಕಾರಿಗಳು ದರ್ಶನ್ ಇಟ್ಟಂತಹ ಟಿವಿ ಬೇಡಿಕೆಗೆ ಸ್ಪಂದಿಸಿದ್ದು, ಜೈಲಿನ ನಿಯಮಾವಳಿಗಳನ್ನು ಪರಿಗಣಿಸಿ ಟಿವಿ ನೀಡಲು ವ್ಯವಸ್ಥೆ ಮಾಡಲಾಗುತ್ತಿದೆ. ಜೈಲಿನಲ್ಲಿ ಈಗಾಗಲೇ ಇರುವ ಟಿವಿಯನ್ನು ರಿಪೇರಿ ಮಾಡಿ ದರ್ಶನ್‌ ಅವರ ಸೆಲ್‌ನಲ್ಲಿ ಆಳವಡಿಸುವ ಯೋಚನೆ ಮಾಡಲಾಗುತ್ತಿದೆ ಎಂದು ವರದಿಯಾಗಿದೆ. ಸದ್ಯ ಪ್ರಕರಣ ಸಂಬಂಧ ಆರೋಪಿಗಳ ವಿರುದ್ಧ ಪೊಲೀಸರು ಸಾಕ್ಷಿಗಳನ್ನು ಸಂಗ್ರಹಿಸಿಕೊಂಡು 4500 ಪುಟಗಳ ಆರೋಪ ಪಟ್ಟಿ ಸಲ್ಲಿಕೆಗೆ ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ. 

- Advertisement -

Latest News

error: Content is protected !!