Saturday, June 13, 2026
Homeಕರಾವಳಿಉಡುಪಿಉಡುಪಿ : ತನ್ನ ಕ್ಲಾಸ್ ಮೇಟ್ ಗೆ ಮುಸ್ಲಿಂ ಧರ್ಮಕ್ಕೆ ಮತಾಂತರ ಆಗುವಂತೆ ಒತ್ತಾಯಿಸಿದ ಆರೋಪಿಯ...

ಉಡುಪಿ : ತನ್ನ ಕ್ಲಾಸ್ ಮೇಟ್ ಗೆ ಮುಸ್ಲಿಂ ಧರ್ಮಕ್ಕೆ ಮತಾಂತರ ಆಗುವಂತೆ ಒತ್ತಾಯಿಸಿದ ಆರೋಪಿಯ ಬಂಧನ

- Advertisement -
- Advertisement -

ಉಡುಪಿ : ತನ್ನ ಕ್ಲಾಸ್ ಮೇಟ್ ಗೆ ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡುವಂತೆ ಒತ್ತಾಯಿಸಿದ ಆರೋಪಿಯನ್ನು ಬಂಧಿಸಿರುವ ಘಟನೆ ಮಣಿಪಾಲದಲ್ಲಿ ನಡೆದಿದೆ. ಮೊಹಮ್ಮದ್ ಡಾನಿಶ್ ಖಾನ್ (27) ಬಂಧಿತ ಆರೋಪಿ.

ಇಬ್ಬರು ವಿದ್ಯಾರ್ಥಿಗಳು ದೆಹಲಿ ಮತ್ತು ರಾಜಸ್ಥಾನದವರಾಗಿದ್ದು, ಮಣಿಪಾಲ ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ವ್ಯಾಸಂಗ ಮಾಡುತ್ತಿದ್ದರು . ಡಾನಿಶ್ ಸಂತ್ರಸ್ತೆಗೆ ಮದುವೆಯ ಪ್ರಸ್ತಾಪವನ್ನು ಇಟ್ಟಿದ್ದ. ಆದರೆ ಮದುವೆಗೆ ಷರತ್ತಿನಂತೆ ಇಸ್ಲಾಂಗೆ ಮತಾಂತರಗೊಳ್ಳುವಂತೆ ಒತ್ತಾಯಿಸಿದ್ದಾನೆ. ಜನವರಿ 22, 2024 ರಂದು ನಡೆದ ಸಂಭಾಷಣೆಯ ಸಂದರ್ಭದಲ್ಲಿ ಡಾನಿಶ್ ಹಿಂದೂ ಧರ್ಮ ಮತ್ತು ರಾಮ ಮಂದಿರದ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾನೆ ಎಂದು ಸಂತ್ರಸ್ತೆ ಹೇಳಿಕೊಂಡಿದ್ದಾಳೆ .

ಮಾರ್ಚ್ 11, 2024 ರಂದು ಸಂತ್ರಸ್ತೆ ಡಾನಿಶ್ ಅವರ ಕೋಣೆಗೆ ಭೇಟಿ ನೀಡಿದಾಗ ಅವನು ಮತಾಂತರಗೊಳ್ಳುವಂತೆ ಒತ್ತಡ ಹೇರಿದ್ದ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಆಕೆ ನಿರಾಕರಿಸಿದ ಮೇಲೆ ಆಕೆಗೆ ಕಪಾಳಮೋಕ್ಷ ಮಾಡಿ, ಕೂದಲು ಎಳೆದುಕೊಂಡು ದೈಹಿಕವಾಗಿ ಹಲ್ಲೆ ನಡೆಸಿದ್ದಾನೆ. ಸಂತ್ರಸ್ತೆ ಡಾನಿಶ್ ತನ್ನ ಖಾಸಗಿ ಅಂಗಗಳನ್ನು ಸ್ಪರ್ಶಿಸಿ ಲೈಂಗಿಕ ಬೇಡಿಕೆ ಇಟ್ಟಿದ್ದಾನೆ ಎಂದು ಹೇಳಿಕೆ ನೀಡಿದ್ದಾರೆ.

ಆಗಸ್ಟ್ 28, 2024 ರವರೆಗೆ ಡ್ಯಾನಿಶ್ ಫೋನ್ ಮೂಲಕ ಕಿರುಕುಳ ನೀಡುವುದನ್ನು ಮುಂದುವರೆಸಿದ್ದಾನೆ ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ. ದೂರಿನ ಮೇರೆಗೆ ಪೊಲೀಸರು ಮೊಹಮ್ಮದ್ ಢಾನಿಶ್ ಖಾನ್ ಅವರನ್ನು ಬಂಧಿಸಿ ನ್ಯಾಯಾಲಯದಿಂದ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.

- Advertisement -

Latest News

error: Content is protected !!