Saturday, June 6, 2026
Homeಅಪರಾಧಮಣಿಪಾಲದಲ್ಲಿ ಯುವಕನ ಹಲ್ಲೆಗೈದು ಹಣ ಸುಲಿಗೆ

ಮಣಿಪಾಲದಲ್ಲಿ ಯುವಕನ ಹಲ್ಲೆಗೈದು ಹಣ ಸುಲಿಗೆ

- Advertisement -
- Advertisement -

ಮಣಿಪಾಲ: ಮಂಗಳೂರಿನ ತೋಕೂರು ನಿವಾಸಿ ಅಬ್ದುಲ್‌ ರಾಝೀಕ್‌ (21) ಶುಭ ಸಮಾರಂಭಗಳಿಗೆ ಹಾಡುಗಳ ರೆಕಾರ್ಡ್‌ ಮಾಡುವ ವೃತ್ತಿ ಮಾಡಿಕೊಂಡಿದ್ದು, ಅವರಿಗೆ ಗುಂಪೊಂದು ಮಣಿಪಾಲದಲ್ಲಿ ಹಲ್ಲೆ ನಡೆಸಿದ ಘಟನೆ ಸಂಭವಿಸಿದೆ.

ಘಟನೆಯ ವಿವರ: ರಾಝೀಕ್‌ಗೆ ವಾಜಿದ್‌ ಎಂಬಾತ ತನ್ನ ಅಕ್ಕನ ಮಗಳ ಹುಟ್ಟುಹಬ್ಬಕ್ಕೆ ಹಾಡು ರೆಕಾರ್ಡ್‌ ಮಾಡಿಕೊಡಬೇಕೆಂದು ತಿಳಿಸಿದ್ದು, ಹಾಡು ರೆಕಾರ್ಡ್‌ ಮಾಡಿ ನೀಡಿದ ಬಳಿಕ ಹಣವನ್ನು ನೀಡದೆ ಸತಾಯಿಸಿದ್ದರು. ಕೊನೆಗೆ ಮಣಿಪಾಲಕ್ಕೆ ಬಂದರೆ ಹಣ ಕೊಡುತ್ತೇನೆ ಎಂದು ಹೇಳಿ ಕರೆಸಿದ ವಾಜಿದ್‌ ಮತ್ತು ಆತನ ಸ್ನೇಹಿತರು ರಾಝೀಕ್‌ಗೆ ಹಲ್ಲೆ ಮಾಡಿ ಕುತ್ತಿಗೆಯಲ್ಲಿದ್ದ ಸುಮಾರು 2 ಸಾವಿರ ರೂ ಮೌಲ್ಯದ ಬೆಳ್ಳಿ ಚೈನು, 30 ಸಾವಿರ ರೂ. ನಗದು, 70 ಸಾವಿರ ರೂ. ಮೌಲ್ಯದ ಐಫೋನ್‌ ಸುಲಿಗೆ ಮಾಡಿದ್ದಾರೆ. ಗಾಯಗೊಂಡ ರಾಝೀಕ್‌ ಅವರನ್ನು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.

ಘಟನೆಯ ಕುರಿತು ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!