Thursday, June 4, 2026
Homeಕರಾವಳಿಪುತ್ತೂರು; ಬಸ್ ನಿಲ್ದಾಣದಲ್ಲಿ ಬಸ್  ನಿಲ್ಲಿಸಿಲ್ಲ ಎಂದು ಕೆಎಸ್ ಆರ್ ಟಿಸಿ ಚಾಲಕನ ಮೇಲೆ KSRTC...

ಪುತ್ತೂರು; ಬಸ್ ನಿಲ್ದಾಣದಲ್ಲಿ ಬಸ್  ನಿಲ್ಲಿಸಿಲ್ಲ ಎಂದು ಕೆಎಸ್ ಆರ್ ಟಿಸಿ ಚಾಲಕನ ಮೇಲೆ KSRTC ಅಧಿಕಾರಿಯಿಂದ ಹಲ್ಲೆ

- Advertisement -
- Advertisement -

ಪುತ್ತೂರು; ಬಸ್ ನಿಲ್ದಾಣದಲ್ಲಿ ಬಸ್  ನಿಲ್ಲಿಸಿಲ್ಲ ಎಂದು ಕೆಎಸ್ ಆರ್ ಟಿ ಚಾಲಕ ಮೇಲೆ KSRTC ಅಧಿಕಾರಿ ಹಲ್ಲೆ ನಡೆಸಿದ ಘಟನೆ ಸವಣೂರಿನಲ್ಲಿ ನಡೆದಿದೆ.

ಸವಣೂರು ವಿದ್ಯಾರಶ್ಮಿ ವಿದ್ಯಾಸಂಸ್ಥೆಯ ಬಸ್ ನಿಲ್ದಾಣದಲ್ಲಿ ನಿಂತಿದ್ದ  ಕೆಎಸ್ ಆರ್ ಟಿಸಿ ಅಧಿಕಾರಿ ಎಂದು ಹೇಳಿಕೊಂಡಿರುವ ವ್ಯಕ್ತಿ  ಬಸ್ ನಿಲ್ದಾಣ ಬಳಿ ಬಸ್ ಸ್ಟಾಪ್ ಮಾಡಿಲ್ಲ ಅಂತಾ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಚಾಲಕ ಭರತ್ ಎಂಬವರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಬಸ್ ಚಾಲಕ ಬೆಳ್ಳಾರೆ ಪೊಲೀಸರಿಗೆ ದೂರು ನೀಡಿದ್ದಾರೆ. ಭರತ್ ಪುತ್ತೂರು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇನ್ನು ಭರತ್ ಮೇಲೆ ವ್ಯಕ್ತಿ ಹಲ್ಲೆ ಮಾಡುತ್ತಿರೋದನ್ನು ಪ್ರಯಾಣಿಕರು ವೀಡಿಯೋ ಮಾಡಿದ್ದು ವೀಡಿಯೋ ವೈರಲ್ ಆಗಿದೆ.

- Advertisement -

Latest News

error: Content is protected !!